ADVERTISEMENT

ಲಾಕ್‌ಡೌನ್‌: 12 ಸಾವಿರ ಕ್ರೀಡಾ ವೈದ್ಯರೊಂದಿಗೆ ಸಚಿನ್ ಸಂವಾದ

ಪಿಟಿಐ
Published 12 ಏಪ್ರಿಲ್ 2020, 10:24 IST
Last Updated 12 ಏಪ್ರಿಲ್ 2020, 10:24 IST
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್   

ಮುಂಬೈ: ಕೊರೊನಾ ವೈರಸ್ ಸೋಂಕು ತಡೆಯಲು ದೇಶದಲ್ಲಿ ದಿಗ್ಬಂಧನ ಹಾಕಲಾಗಿದೆ. ಕ್ರೀಡಾಪಟುಗಳು ತಮ್ಮ ಮನೆಗಳಲ್ಲಿಯೇ ಬಂದಿಯಾಗಿದ್ದಾರೆ.

ಈ ಹಂತದಲ್ಲಿ ಎದುರಾಗಬಹುದಾದ ಗಾಯಗಳು ಮತ್ತು ಫಿಟ್‌ನೆಸ್‌ ಸಮಸ್ಯೆಯನ್ನು ನಿಭಾಯಿಸುವ ಕುರಿತು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ಅವರುಶನಿವಾರ 12 ಸಾವಿರ ಕ್ರೀಡಾ ವೈದ್ಯರೊಂದಿಗೆ ಸಂವಾದ ನಡೆಸಿದರು.

ವೆಬಿನಾರ್ ಮೂಲಕ ಸಂವಾದ ನಡೆಸಿದ ಸಚಿನ್, ಲಾಕ್‌ಡೌನ್‌ನಲ್ಲಿ ಲಭಿಸಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದರ ಬಗ್ಗೆಯೂ ಮಾತನಾಡಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಮೂಳೆ ತಜ್ಞ ಸುಧೀರ್ ವಾರಿಯರ್, ‘ಈ ಕ್ಷೇತ್ರದಲ್ಲಿರುವ ಯುವ ವೈದ್ಯರಿಗೆ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಇದು ಸಕಾಲವಾಗಿದೆ. ಕ್ರೀಡೆಯಲ್ಲಿ ಆಗುವ ಗಾಯಗಳ ಚಿಕಿತ್ಸೆಯ ಹೊಸ ಕೌಶಲ್ಯ ಮತ್ತು ತಂತ್ರಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದ್ದಾರೆ.

‘ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯು ಇವತ್ತು ಮನುಕುಲಕ್ಕೆ ಮಾಡುತ್ತಿರುವ ಸೇವೆಯು ಅಮೂಲ್ಯವಾದದ್ದು. ಅವರಿಗೆ ಅನಂತ ಕೃತಜ್ಞತೆಗಳು. ನಿಮಗೆ ನಾವು ಚಿರಋಣಿ’ 46 ವರ್ಷದ ಸಚಿನ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.