ADVERTISEMENT

ಎಂ.ಎಸ್‌. ಧೋನಿಗೆ ಪತ್ನಿಯ‌ ವಿಶೇಷ ಸಂದೇಶ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 14:35 IST
Last Updated 5 ಜುಲೈ 2020, 14:35 IST
ಮಗಳು ಜೀವಾ ಜೊತೆ ಸಾಕ್ಷಿ, ಧೋನಿ
ಮಗಳು ಜೀವಾ ಜೊತೆ ಸಾಕ್ಷಿ, ಧೋನಿ   

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಸಿಂಗ್‌ ಮದುವೆಯಾಗಿ ಜೂನ್‌ 4ಕ್ಕೆ 10 ವರ್ಷ. 2010ರಲ್ಲಿ ಡೆಹ್ರಾಡೂನ್‌ನಲ್ಲಿ ಧೋನಿ, ಸಾಕ್ಷಿ ಸಿಂಗ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಜೀವಾ ಎಂಬ ಐದು ವರ್ಷದ ಮಗಳಿದ್ದಾಳೆ.

ತಮ್ಮ ಮದುವೆಯ ದಶಮಾನೋತ್ಸವ ಸಂದರ್ಭದಲ್ಲಿ ಸಾಕ್ಷಿ ಸಿಂಗ್‌, ಧೋನಿಗೆ ಹೃದಯಾಂತರಾಳದಿಂದ ಶುಭಾಶಯ ಕೋರಿದ್ದು, ಆ ಸಂದೇಶವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅವರ ಸಂದೇಶ ಹೀಗಿದೆ: ‘ನಾವು ಈ ಹತ್ತು ವರ್ಷ ಜೊತೆಯಾಗಿ ತಂಡದಂತೆಕೆಲಸ ಮಾಡಿದೆವು.ಒಬ್ಬರ ಬೆಳವಣಿಗೆಗೆ ಇನ್ನೊಬ್ಬರು ಅವಕಾಶ ಕೊಟ್ಟಿದ್ದರಿಂದ ಪ್ರಬುದ್ಧರಾದೆವು. ಅತಿಯಾದಪ್ರೀತಿಯೇ ನಮ್ಮನ್ನು ಹೆಚ್ಚು ಹತ್ತಿರ ತಂದಿತು. ಜೀವನದಲ್ಲಿ ಆದ್ಯತೆ ನೀಡಿದ ವಿಚಾರಗಳಿಂದ ಅದರ ಮಹತ್ವ ನಮಗೆ ಗೊತ್ತಾಯಿತು. ಜೀವನದಲ್ಲಿ ಕಂಡ ಏರಿಳಿತಗಳಲ್ಲಿ ಜೊತೆಯಾಗಿ ಇದ್ದಿದ್ದರಿಂದ ಪ್ರೀತಿಯೆಂಬ ಜಾದೂವನ್ನು ನಾವು ಅರ್ಥ ಮಾಡಿಕೊಂಡೆವು’

ADVERTISEMENT

ಈ ಪೋಸ್ಟ್‌ ಅನ್ನು ಆರು ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು, ಸಾವಿರಾರು ಜನರು ಈ ಜೋಡಿಗೆ ಶುಭಾಶಯ ಕೋರಿದ್ದಾರೆ.

ರಾಂಚಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ಈ ಜೋಡಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.