ಕೆಲವೇ ತಿಂಗಳಲ್ಲಿ 17 ಕೆ.ಜಿ ತೂಕ ಇಳಿಸಿಕೊಂಡ ಕ್ರಿಕೆಟರ್ ಸರ್ಫರಾಜ್ ಖಾನ್
ನವದೆಹಲಿ: ಫಿಟ್‌ನೆಸ್ ಕಾರಣದಿಂದ ಸದಾ ಟೀಕೆಗೆ ಒಳಗಾಗುತ್ತಿದ್ದ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸರ್ಫರಾಜ್ ಖಾನ್ ಕೆಲವೇ ತಿಂಗಳಲ್ಲಿ ಬರೋಬ್ಬರಿ 17 ಕೆ.ಜಿ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
2024ರಲ್ಲಿ ಪದಾರ್ಪಣೆ ಮಾಡಿ, ಭಾರತ ಪರ ಆರು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಸರ್ಫರಾಜ್ ಖಾನ್‌ಗೆ ನಂತರ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.
27 ವರ್ಷದ ಸರ್ಫರಾಜ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಅದ್ಭುತವಾಗಿಯೇ ಆರಂಭಿಸಿದ್ದರು. ಆದರೆ ಫಿಟ್‌ನೆಸ್ ಕಾರಣ ಅವಕಾಶಗಳಿಂದ ವಂಚಿತರಾಗಿದ್ದರು. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಸರ್ಫರಾಜ್ ಭಾರತೀಯ ತಂಡದ ಭಾಗವಾಗಿದ್ದರು ಆದರೆ ಅವರಿಗೆ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ಸಿಕ್ಕಿರಲಿಲ್ಲ
ಇನ್ನೊಂದೆಡೆ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರವಸೆಯ ಮೂಡಿಸುವ ಆಟವನ್ನು ಪ್ರದರ್ಶಿಸಿದ್ದರೂ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಗೆ ಕಡೆಗಣಿಸಲಾಗಿತ್ತು. ಆಯ್ಕೆದಾರರು ಸಾಯಿ ಸುದರ್ಶನ್ ಮತ್ತು ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿದ್ದರು.
ಸದ್ಯ, ಸರ್ಫರಾಜ್ ಅವರ ತೂಕ ಇಳಿಕೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್ ಕುರಿತ ಮೀಮ್ಸ್‌ಗಳು ಹರಿದಾಡುತ್ತಿದ್ದು, ‘ಸರ್ಫರಾಜ್ 2.0 ರೆಡಿ’ ಎಂದು ಕಮೆಂಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.