ADVERTISEMENT

ನಾಯಕತ್ವದಿಂದ ಸರ್ಫರಾಜ್‌ ವಜಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:45 IST
Last Updated 18 ಅಕ್ಟೋಬರ್ 2019, 19:45 IST
ಸರ್ಫರಾಜ್‌ ಅಹಮದ್‌
ಸರ್ಫರಾಜ್‌ ಅಹಮದ್‌   

ಲಾಹೋರ್‌ : ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಸರ್ಫರಾಜ್‌ ಅಹಮದ್‌ ಅವರನ್ನು ಟ್ವೆಂಟಿ–20 ಮತ್ತು ಟೆಸ್ಟ್‌ ತಂಡಗಳ ನಾಯಕತ್ವದಿಂದ ಶುಕ್ರವಾರ ವಜಾ ಮಾಡಿದೆ.

ಹೋದ ವಾರ ನಡೆದಿದ್ದ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯಲ್ಲಿ ಪಾಕಿಸ್ತಾನವು ಹೀನಾಯವಾಗಿ ಸೋತಿತ್ತು. ಹೀಗಾಗಿ ಸರ್ಫರಾಜ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.

ಅಜರ್‌ ಅಲಿ ಮತ್ತು ಬಾಬರ್‌ ಅಜಂ ಅವರನ್ನು ಕ್ರಮವಾಗಿ ಟೆಸ್ಟ್‌ ಮತ್ತು ಟ್ವೆಂಟಿ–20 ತಂಡಗಳ ನಾಯಕರನ್ನಾಗಿ ನೇಮಿಸಲಾಗಿದೆ. ಬಾಬರ್‌ ಅವರು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವ ಟ್ವೆಂಟಿ–20 ಟೂರ್ನಿಯವರೆಗೂ ನಾಯಕರಾಗಿರಲಿದ್ದಾರೆ.

ADVERTISEMENT

‘ಪಾಕಿಸ್ತಾನದ ಟೆಸ್ಟ್‌ ಮತ್ತು ಟ್ವೆಂಟಿ–20 ತಂಡಗಳಿಗೆ ನಾಯಕರಾಗಿ ನೇಮಕಗೊಂಡಿರುವ ಅಜರ್‌ ಮತ್ತು ಬಾಬರ್‌ಗೆ ಅಭಿನಂದನೆಗಳು. ಇಷ್ಟು ಕಾಲ ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸರ್ಫರಾಜ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.