ADVERTISEMENT

IND v AUS 4th Test: ಮಳೆ ಅಡಚಣೆ, ಎರಡನೇ ದಿನದಾಟ ಅಂತ್ಯಕ್ಕೆ ಭಾರತ 62/2

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 7:54 IST
Last Updated 16 ಜನವರಿ 2021, 7:54 IST
ಪಿಚ್ ಪರಿಶೀಲನೆ ನಡೆಸುತ್ತಿರುವ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್, ಅಂಪೈರ್‌ಗಳು: ಎಎಫ್‌ಪಿ ಚಿತ್ರ
ಪಿಚ್ ಪರಿಶೀಲನೆ ನಡೆಸುತ್ತಿರುವ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್, ಅಂಪೈರ್‌ಗಳು: ಎಎಫ್‌ಪಿ ಚಿತ್ರ   

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದ ಮೂರನೇ ಅವಧಿಯ ಆಟ ಮಳೆಗೆ ಆಹುತಿಯಾಗಿದೆ.

ಟೀ ವಿರಾಮದ ಸಂದರ್ಭ ಅಧಿಕ ಮಳೆ ಆರಂಭವಾಗಿದ್ದರಿಂದ ಪಂದ್ಯ ವಿಳಂಬವಾಯಿತು. ಮಳೆ ಆರಂಭವಾದ ಕೆಲವೇ ಸಮಯದಲ್ಲಿ ಮೈದಾನ ಕೆರೆಯಂತಾಗಿತ್ತು. ಮಳೆ ನಿಂತ ಬಳಿಕ ಅಂಪೈರ್‌ಗಳು ಮೈದಾನವನ್ನು ಪರೀಕ್ಷೆ ನಡೆಸಿದರು. ಮೈದಾನಹೆಚ್ಚು ಒದ್ದೆಯಾಗಿದ್ದರಿಂದ ಎರಡನೇ ದಿನಾದಾಟದ ಮೂರನೇ ಅವಧಿಯ ಪಂದ್ಯವನ್ನು ರದ್ದು ಮಾಡಿ ಆಟವನ್ನು ಕೊನೆಗೊಳಿಸಲಾಯಿತು.

ಇದಕ್ಕೂ ಮುನ್ನ, ಆಸ್ಟ್ರೇಲಿಯಾವನ್ನು 369 ರನ್‌ಗಳಿಗೆ ನಿಯಂತ್ರಿಸಿದ ಭಾರತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ವೇಗವಾಗಿ ರನ್ ಗಳಿಸುತ್ತಿದ್ದ ರೋಹಿತ್ ಶರ್ಮಾ(44) ನಥನ್ ಲಯೋನ್‌ಗೆ ಮತ್ತು ಶುಭ್ಮನ್ ಗಿಲ್(7) ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ, ಭಾರತ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದು, ಅಜಿಂಕ್ಯ ರಹಾನೆ (8) ಮತ್ತು ಚೇತೇಶ್ವರ್ ಪೂಜಾರ (2) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 3 ವಿಕೆಟ್ ಪಡೆದಿದ್ದು, ಇಂದಿನ ಪಂದ್ಯದ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.