ADVERTISEMENT

ಟಿ20: ಜುಲೈನಲ್ಲಿ ಭಾರತ ತಂಡ ಜಿಂಬಾಬ್ವೆ ಪ್ರವಾಸ

ಪಿಟಿಐ
Published 6 ಫೆಬ್ರುವರಿ 2024, 14:09 IST
Last Updated 6 ಫೆಬ್ರುವರಿ 2024, 14:09 IST
<div class="paragraphs"><p>ಸಂಗ್ರಹ ಚಿತ್ರ( ಸಾಂದರ್ಭಿಕ ಚಿತ್ರ)</p></div>

ಸಂಗ್ರಹ ಚಿತ್ರ( ಸಾಂದರ್ಭಿಕ ಚಿತ್ರ)

   

ಹರಾರೆ: ಜುಲೈ6 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಎರಡನೇ ಹಂತದ ಆಟಗಾರರನ್ನು ಒಳಗೊಂಡ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಎಂದು ಇಲ್ಲಿನ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಜೂನ್‌ 29ರಂದು ಮುಗಿದ ತಕ್ಷಣ ನಡೆಯಲಿರುವ ಈ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರು ಭಾಗವಹಿಸುವ ಸಾಧ್ಯತೆಯಿಲ್ಲ. ಈ ಹಿಂದೆಯೂ, ಈ ದಕ್ಷಿಣ ಆಫ್ರಿಕಾ ರಾಷ್ಟ್ರದ ಪ್ರವಾಸಕ್ಕೆ ಪ್ರಮುಖ ಆಟಗಾರರು ಹೋಗುತ್ತಿರಲಿಲ್ಲ.

ADVERTISEMENT

ಐದು ಪಂದ್ಯಗಳು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ  ಜುಲೈ 6, 7, 10, 13 ಮತ್ತು 14 ರಂದು ನಡೆಯಲಿವೆ.

‘ಭಾರತ ತಂಡ ಐದು ಟಿ20 ಪಂದ್ಯಗಳಿಗಾಗಿ ಜಿಂಬಾಬ್ವೆಯು ಆತಿಥ್ಯ ವಹಿಸಲಿದೆ ಎಂದು ಕ್ರಿಕೆಟ್‌ (ಝಡ್‌ಸಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿವೆ’ ಎಂದು ಝಡ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ, ‘ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಕೊಡುಗೆ ನೀಡುವಲ್ಲಿ ಬಿಸಿಸಿಐ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ. ಇದು ಜಿಂಬಾಬ್ವೆಗೆ ಪುನರ್ನಿರ್ಮಾಣದ ಅವಧಿ ಮತ್ತು ಈ ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್‌ಗೆ ನಮ್ಮ ಬೆಂಬಲ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.