ADVERTISEMENT

ಏಕದಿನ ಕ್ರಿಕೆಟ್: ಬಾಂಗ್ಲಾ ವಿರುದ್ಧದ ಸರಣಿ ವಶಪಡಿಸಿಕೊಂಡ ಅಘ್ಗಾನ್‌

ಪಿಟಿಐ
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ಶತಕದ ಸಂಭ್ರಮದಲ್ಲಿ ರಹಮಾನುಲ್ಲಾ ಗುರ್ಬಾಜ್
ಶತಕದ ಸಂಭ್ರಮದಲ್ಲಿ ರಹಮಾನುಲ್ಲಾ ಗುರ್ಬಾಜ್    –ಎಎಫ್‌ಪಿ ಚಿತ್ರ

ಚತ್ತೋಗ್ರಾಮ್:  ಆರಂಭಿಕ ಬ್ಯಾಟರ್‌ಗಳಾದ  ರಹಮಾನುಲ್ಲಾ ಗುರ್ಬಾಜ್ (145ರನ್‌, 125ಎಸೆತ, 13x4, 8x6) ಮತ್ತು ಇಬ್ರಾಹಿಂ ಜದ್ರಾನ್ (100ರನ್‌, 119ಎಸೆತ, 9x4, 1x6) ಅವರ ಶತಕದ ನೆರವಿನಿಂದ ಆಘ್ಗಾನಿಸ್ತಾನ ತಂಡವು ಬಾಂಗ್ಲಾದೇಶದ ವಿರುದ್ಧ ಜಯಿಸಿತು.  

ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಅಫ್ಗನ್ ಪಡೆಯು ಕೈವಶ ಮಾಡಿಕೊಂಡಿದೆ.

ಟಾಸ್‌ ಗೆದ್ದ ಬಾಂಗ್ಲಾ ತಂಡ ಫಿಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಫ್ಗಾನಿಸ್ತಾನದ ಗುರ್ಬಾಜ್‌ ಮತ್ತು ಜದ್ರಾನ್‌ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಮೊದಲ ವಿಕೆಟ್‌ಗೆ ದಾಖಲೆಯ 256 ರನ್‌ ಕಲೆ ಹಾಕಿದರು. ಅಫ್ಗನ್ ಪರವಾಗಿ ಮೊದಲ ವಿಕೆಟ್‌ಗೆ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.

ADVERTISEMENT

ಅಫ್ಗಾನಿಸ್ತಾನವು 50 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 331ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ತಂಡ ಆರಂಭದಲ್ಲೇ ಮುಗ್ಗರಿಸಿತು. 43.2 ಓವರ್‌ಗಳಿಗೆ 189ಕ್ಕೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಆಫ್ಗಾನಿಸ್ತಾನ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 331 (ರಹಮಾನುಲ್ಲಾ ಗುರ್ಬಾಜ್ 145, ಇಬ್ರಾಹಿಂ ಜದ್ರಾನ್ 100, ಶಕೀಬ್ ಅಲ್ ಹಸನ್ 50ಕ್ಕೆ 2): ಬಾಂಗ್ಲಾದೇಶ: 43.2 ಓವರ್‌ಗಳಲ್ಲಿ 189 (ಮುಷ್ಫಿಕರ್ ರಹೀಮ್ 69, ಫಜಲ್ಹಕ್ ಫಾರೂಕಿ 22ಕ್ಕೆ 3, ಮುಜೀಬ್ ಉರ್ ರೆಹಮಾನ್ 40ಕ್ಕೆ 3): ಫಲಿತಾಂಶ– ಅಫ್ಗಾನಿಸ್ತಾನಕ್ಕೆ 142 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.