ADVERTISEMENT

₹ 18 ಲಕ್ಷಕ್ಕೆ ಮಾರಾಟವಾದ ಶಕೀಬ್‌ ಬ್ಯಾಟ್‌

ನ್ಯೂಯಾರ್ಕ್‌ನ ವ್ಯಕ್ತಿಯಿಂದ ಖರೀದಿ

ಏಜೆನ್ಸೀಸ್
Published 23 ಏಪ್ರಿಲ್ 2020, 19:45 IST
Last Updated 23 ಏಪ್ರಿಲ್ 2020, 19:45 IST
ಶಕೀಬ್ ಅಲ್ ಹಸನ್
ಶಕೀಬ್ ಅಲ್ ಹಸನ್   

ಢಾಕಾ: ಕೊರೊನಾ ವೈರಸ್‌ ಪಿಡುಗು ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಶಕೀಬ್‌ ಅಲ್‌ ಹಸನ್‌ ಹರಾಜಿಗಿಟ್ಟಿದ್ದ ಬ್ಯಾಟ್‌ ಸುಮಾರು ₹ 18 ಲಕ್ಷಕ್ಕೆ ಮಾರಾಟವಾಗಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್‌ ಈ ಬ್ಯಾಟಿನಿಂದ 606 ರನ್‌ ಹರಿಸಿದ್ದರು.

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು ಆನ್‌ಲೈನ್‌ ಹರಾಜಿನಲ್ಲಿ ಈ ಬ್ಯಾಟ್‌ ಖರೀದಿಸಿದ್ದಾರೆ ಎಂದು ದೇಣಿಗೆ ಸಂಗ್ರಹಿಸಲು ರೂಪಿಸಿದ ಸಂಸ್ಥೆಯ ಸಹ–ಸ್ಥಾಪಕ ಆರಿಫ್‌ ಆರ್‌.ಹುಸೇನ್‌ ಗುರುವಾರ ತಿಳಿಸಿದ್ದಾರೆ. ‘ಇದು ನಮ್ಮ ಮೊದಲ ಕಾರ್ಯಕ್ರಮ. ಸಿಕ್ಕ ಪ್ರತಿಕ್ರಿಯೆಯಿಂದ ಸಂತಸವಾಗಿದೆ‘ ಎಂದು ಹುಸೇನ್‌ ಹೇಳಿದ್ದಾರೆ.

ಬುಕ್ಕಿಯೊಬ್ಬರು ತಮ್ಮನ್ನು ಸಂಪರ್ಕಿಸಿದ್ದ ವಿಚಾರವನ್ನು ಮುಚ್ಚಿಟ್ಟ ಆರೋಪದ ಮೇಲೆ ಶಕೀಬ್‌ ಅವರ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಅವರು ನಿಷೇಧ ಅವಧಿ ಪೂರೈಸಲಿದ್ದಾರೆ.

ADVERTISEMENT

ಬಾಂಗ್ಲಾದೇಶದಲ್ಲಿ 4,186 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, 127 ಮಂದಿ ಕೋವಿಡ್‌ –19ರಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.