ADVERTISEMENT

ಕ್ರಿಕೆಟಿಗರ ಸಂಘಟನೆ ಐಸಿಎಗೆ ಕನ್ನಡತಿ ಶಾಂತಾ ರಂಗಸ್ವಾಮಿ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 14:01 IST
Last Updated 17 ಅಕ್ಟೋಬರ್ 2025, 14:01 IST
<div class="paragraphs"><p>ಶಾಂತಾ ರಂಗಸ್ವಾಮಿ</p></div>

ಶಾಂತಾ ರಂಗಸ್ವಾಮಿ

   

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಥಮ ನಾಯಕಿಯಾಗಿದ್ದ ಶಾಂತಾ ರಂಗಸ್ವಾಮಿ ಅವರನ್ನು ಭಾರತೀಯ ಕ್ರಿಕೆಟಿಗರ ಸಂಘಟನೆ (ಐಸಿಎ)ಗೆ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಶಾಂತಾ ಅವರು ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 

ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ  ವೆಂಕಿಟ್ಟು ಸುಂದರಂ ಮತ್ತು ದೀಪಕ್ ಜೈನ್ ಅವರು ಕ್ರಮವಾಗಿ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಆಯ್ಕೆಯಾದರು. ಸಂತೋಷ್ ಸುಬ್ರಮಣಿಯಂ ಮತ್ತು ಜ್ಯೋತಿ ಜಿ ತಟ್ಟೆ ಅವರನ್ನು ಸದಸ್ಯ ಪ್ರತಿನಿಧಿಗಳನ್ನಾಗಿ ನೇಮಕ ಮಾಡಲಾಯಿತು. 

ADVERTISEMENT

ವೆಂಕಿನಾ ಚಾಮುಂಡೇಶ್ವರ್ ನಾಥ್ ಮತ್ತು ಸುಧಾ ಶಾ ಅವರು ಕ್ರಮವಾಗಿ ಬಿಸಿಸಿಐನಲ್ಲಿ ಐಸಿಸಿ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಶುಭಾಂಗಿ ಡಿ ಕುಲಕರ್ಣಿ ಅವರನ್ನು ಐಪಿಎಲ್ ಆಡಳಿತ ಸಮಿತಿಗೆ ನಾಮನಿರ್ದೇಶನ ಮಾಡಲಾಯಿತು. 

71 ವರ್ಷದ ಶಾಂತಾ ಅವರು ಮೂಲತಃ ಬೆಂಗಳೂರಿನವರು. 1976 ರಿಂದ 1991ರ ಅವಧಿಯಲ್ಲಿ ಭಾರತ ಮಹಿಳಾ ತಂಡದಲ್ಲಿ ಆಡಿದ್ದರು. ಅಲ್ಲದೇ ರಾಷ್ಟ್ರೀಯ ತಂಡದ ಮೊದಲ ನಾಯಕಿಯೆಂಬ ಹೆಗ್ಗಳಿಕೆಯೂ ಅವರದ್ದಾಗಿದೆ. 

ಅವರು 16 ಟೆಸ್ಟ್‌ಗಳಲ್ಲಿ ಆಡಿ ಒಂದು ಶತಕ ಹಾಗೂ ಆರು ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟು 750 ರನ್‌ಗಳು ಅವರ ಖಾತೆಯಲ್ಲಿವೆ. 21 ವಿಕೆಟ್‌ಗಳನ್ನೂ ಗಳಿಸಿದ್ದಾರೆ. 19 ಏಕದಿನ ಪಂದ್ಯಗಳಿಂದ 287 ರನ್‌ ಪೇರಿಸಿದ್ದಾರೆ. ಅದರಲ್ಲಿ ಒಂದು ಅರ್ಧಶತಕ ಇದೆ. ಈ ಮಾದರಿಯಲ್ಲಿಯೂ ಅವರು ಒಟ್ಟು 12 ವಿಕೆಟ್ ಗಳಿಸಿದ್ದರು. ನಿವೃತ್ತಿಯ ನಂತರ ಬೇರೆ ಬೇರೆ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.