ADVERTISEMENT

ಹಾವುಗಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಶಿಖರ್ ಧವನ್‌ ಮಗ

ಭಿನ್ನವಾಗಿ ಜನ್ಮದಿನ ಆಚರಿಸಿದ ಜೋರಾವರ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:14 IST
Last Updated 23 ಡಿಸೆಂಬರ್ 2018, 17:14 IST
ಹಾವು, ಕಪ್ಪೆಯೊಂದಿಗೆ ಜನ್ಮದಿನ ಆಚರಿಸಿಕೊಂಡ ಜೋರಾವರ್
ಹಾವು, ಕಪ್ಪೆಯೊಂದಿಗೆ ಜನ್ಮದಿನ ಆಚರಿಸಿಕೊಂಡ ಜೋರಾವರ್   

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಮಗ ಜೋರಾವರ್ ಶನಿವಾರ ತನ್ನ ಐದನೇ ವರ್ಷದ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡನು. ಈ ಬಾಲಕ ಬರೀ ಕೇಕ್ ಕತ್ತರಿಸಿ, ಚಾಕಲೆಟ್‌ ಹಂಚಿ ಸಂಭ್ರಮಿಸಲಿಲ್ಲ.

ಕೇಕ್ ಕತ್ತರಿಸುವ ಸಂದರ್ಭದಲ್ಲಿ ಜೋರಾವರ್‌ ಕುತ್ತಿಗೆಯಲ್ಲಿ ಹೆಬ್ಬಾವು, ತಲೆ ಮೇಲೆ ಕಪ್ಪೆ ಮತ್ತು ಸ್ಕಿಂಕ್ (ಹಲ್ಲಿ ಜಾತಿಯ ಪ್ರಾಣಿ) ಇದ್ದವು.

ಪ್ರಾಣಿ, ಪಕ್ಷಿಗಳೆಂದರೆ ಅಪಾರ ಇಷ್ಟಪಡುವ ಜೋರಾವರ್‌ಗಾಗಿ ಆತನ ತಾಯಿ ಅಯೇಷಾ ಮುಖರ್ಜಿ ಅವರು ಈ ಜನ್ಮದಿನದ ಪಾರ್ಟಿ ಏರ್ಪಡಿಸಿದ್ದರು. ಇದರಲ್ಲಿ ಆತನ ಶಾಲೆಯ ಸ್ನೇಹಿತರು ಮತ್ತಿತರರು ಭಾಗವಹಿಸಿದ್ದರು. ಈ ಪಾರ್ಟಿಯ ಮೂರು ಚಿತ್ರಗಳನ್ನು ಅಯೇಷಾ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.