ADVERTISEMENT

IND vs ENG Test | ಅಯ್ಯರ್‌ಗೆ ಫಿಟ್ನೆಸ್‌ ಸಮಸ್ಯೆ; ಉಳಿದ ಟೆಸ್ಟ್‌ಗೆ ಅಲಭ್ಯ?

ಪಿಟಿಐ
Published 9 ಫೆಬ್ರುವರಿ 2024, 13:30 IST
Last Updated 9 ಫೆಬ್ರುವರಿ 2024, 13:30 IST
<div class="paragraphs"><p>ಶ್ರೇಯಸ್ ಅಯ್ಯರ್</p></div>

ಶ್ರೇಯಸ್ ಅಯ್ಯರ್

   

ನವದೆಹಲಿ: ಬೆನ್ನು ನೋವು, ತೊಡೆಸಂಧು ನೋವಿನ ಕಾರಣದಿಂದ ಶ್ರೇಯಸ್ ಅಯ್ಯರ್ ಅವರನ್ನು ಇಂಗ್ಲೆಂಡ್ ವಿರುದ್ಧ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿಲ್ಲ. ಬೆನ್ನು ನೋವು ಈ ಹಿಂದೆಯೂ ಅವರನ್ನು ಬಾಧಿಸಿದ್ದು, ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

29 ವರ್ಷದ ಅಯ್ಯರ್ ಅವರು ಹಾಲಿ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಉತ್ತಮ ಆರಂಭದ ಲಾಭ ಡೆಯಲು ವಿಫಲರಾಗಿದ್ದರು. ಕ್ರಮವಾಗಿ 35, 13, 27 ಮತ್ತು 29 ರನ್ ಗಳಿಸಿದ್ದರು.

ADVERTISEMENT

‘ಅವರು ಬೆನ್ನು ನೋವಿರುವುದಾಗಿ ಹೇಳಿದ್ದಾರೆ’ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ಸರಣಿಯ ಕೊನೆಯ ಮೂರು ಟೆಸ್ಟ್‌ ಪಂದ್ಯಗಳಿಗೆ ಆಯ್ಕೆಗಾರರು ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಮೂರನೇ ಟೆಸ್ಟ್‌ ಫೆಬ್ರುವರಿ 15ರಂದು ರಾಜಕೋಟ್‌ನಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿ ಈಗ 1–1ರಲ್ಲಿ ಸಮನಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.