ADVERTISEMENT

ಕ್ರಿಕೆಟ್: ಸಿರೀಶ್‌ಗೆ ಶತಕ; ವಲ್ಚರ್ಸ್ ಸಿಸಿಗೆ ಭಾರಿ ಗೆಲುವು

ಚಿನ್ಮಯ್‌ಗೆ 118, ಗೌತಮ್ ದಿಲೀಪ್‌ಗೆ 122 ರನ್‌; ಭಾರ್ಗವ್ ಪರಿಣಾಮಕಾರಿ ಬೌಲಿಂಗ್ ದಾಳಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 20:27 IST
Last Updated 13 ಜನವರಿ 2021, 20:27 IST
ಕ್ರಿಕೆಟ್‌
ಕ್ರಿಕೆಟ್‌   

ಬೆಂಗಳೂರು: ಸ್ಫೋಟಕ ಬ್ಯಾಟಿಂಗ್‌ ಮಾಡಿದ ಸಿರೀಶ್ ಬಳಗಾರ್ (111; 93 ಎಸೆತ, 14 ಬೌಂಡರಿ, 2 ಸಿಕ್ಸರ್) ಅವರ ಶತಕ ಮತ್ತು ಭಾರ್ಗವ್ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡ ಕೆಎಸ್‌ಸಿಎ ಗುಂಪು 1,2 ಮತ್ತು 3ರ ಮೂರನೇ ಡಿವಿಷನ್‌ 19 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಹೇಮಂಡ್ಸ್‌ ಕ್ರಿಕೆಟ್ ಕ್ಲಬ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ವಲ್ಚರ್ಸ್ ಕ್ಲಬ್‌ 202 ರನ್‌ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಲ್ಚರ್ಸ್ ಕ್ಲ‌ಬ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 373 ರನ್ ಕಲೆ ಹಾಕಿತು. ಗುರಿ ಬೆ‌ನ್ನತ್ತಿದ ಹ್ಯಾಮಂಡ್ಸ್‌ ತಂಡ 39.2 ಓವರ್‌ಗಳಲ್ಲಿ 171 ರನ್‌ಗಳಿಗೆ ಪತನ ಕಂಡಿತು.

ಮತ್ತೊಂದು ಪಂದ್ಯದಲ್ಲಿ ಚಿನ್ಮಯ್‌ ಎನ್‌.ಎ (118; 105 ಎ, 15 ಬೌಂ, 1 ಸಿ) ಮತ್ತು ಗೌತಮ್ ದಿಲೀಪ್ (122; 104 ಎ, 11 ಬೌಂ) ಅವರ ಶತಕದ ಬಲದಿಂದ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌ 178 ರನ್‌ಗಳಿಂದ ಆರ್‌.ವಿ.ಎಂಜಿನಿಯರಿಂಗ್ ಕಾಲೇಜು ತಂಡವನ್ನು ಮಣಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರು: ವಲ್ಚರ್ಸ್ ಕ್ರಿಕೆಟ್‌ ಕ್ಲಬ್: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 373 (ಮೊಹಮ್ಮದ್ ಅಜಾನ್ 32, ಸಿರೀಶ್‌ ಬಳಗಾರ್ 111, ರಾಹುಲ್ ಪ್ರಸನ್ನ 46, ಸ್ಮರಣ್ 42, ಸುಮುಖ ಪ್ರಸಾದ್ ಔಟಾಗದೆ 74, ಅನಿರುದ್ಧ ಶ್ರೀನಿವಾಸ 37; ಗಗನ್ ಆರ್.ವಸಿಷ್ಠ 69ಕ್ಕೆ4); ಹೇಮಂಡ್ಸ್‌ ಕ್ರಿಕೆಟ್ ಕ್ಲಬ್: 39.2 ಓವರ್‌ಗಳಲ್ಲಿ 171 (ರಿಷವ್ ಅಪ್ಪಚ್ಚು 45, ‍‍ಪವನ್ 36; ಭಾರ್ಗವ್ ಎಸ್‌. 42ಕ್ಕೆ6). ಫಲಿತಾಂಶ:ವಲ್ಚರ್ಸ್ ಕ್ರಿಕೆಟ್‌ ಕ್ಲಬ್‌ಗೆ 202 ರನ್‌ಗಳ ಜಯ.

ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್‌: 49.5 ಓವರ್‌ಗಳಲ್ಲಿ 392 (ಹ್ಯಾಡ್ಲಿ ನೊರೊನ್ಹಾ 42, ಶಿವಮ್ 55, ಚಿನ್ಮಯ್ ಎನ್‌.ಎ 118, ಗೌತಮ್‌ ದಿಲೀಪ್ 122; ನಿಹಾಲಾಕ್ಷ್‌ 80ಕ್ಕೆ4, ರಾಹುಲ್ ಗೌಡ 60ಕ್ಕೆ3); ಆರ್‌.ವಿ.ಎಂಜಿನಿಯರಿಂಗ್ ಕಾಲೇಜು: 50 ಓವರ್‌ಗಳಲ್ಲಿ 6ಕ್ಕೆ 214 (ಪವನ್ ಪ್ರಸಾದ್ 31, ಪ್ರಣಮ್ ಸೀತಾರಾಮ 68, ಮನೋಜ್ ಬಿ ಔಟಾಗದೆ 40, ಯತೀನ್ ಶೆಟ್ಟಿ 41; ಕವಿನ್ ಗೌತಮ್‌ 25ಕ್ಕೆ2, ರುಶಿಲ್ 18ಕ್ಕೆ2). ಫಲಿತಾಂಶ: ಸ್ವಸ್ತಿಕ್ ಯೂನಿಯನ್‌ಗೆ 178 ರನ್‌ಗಳ ಗೆಲುವು.

ಫ್ರೆಂಡ್ಸ್ ಯೂನಿಯನ್ ಸಿಸಿ (2): 40.5 ಓವರ್‌ಗಳಲ್ಲಿ 173 (ಶ್ರವಣ್ ಬಾಬು 55, ಸಚಿನ್‌ 33, ಜ್ಞಾನೇಶ್ ಔಟಾಗದೆ 44; ವಿಶಾಲ್ ಕುಮಾರ್ 19ಕ್ಕೆ3, ಮಿತ್ ದಕ್ಷೇಶ್ 32ಕ್ಕೆ2, ಪ್ರಣವ್‌ ಅರಕ್ಕಲ್ 27ಕ್ಕೆ2); ನೆಪ್ಚೂನ್ ಕ್ರಿಕೆಟ್ ಕ್ಲಬ್‌: 41.2 ಓವರ್‌ಗಳಲ್ಲಿ 140 (ಸುಹಾಸ್ ಔಟಾಗದೆ 33; ಅನಿಲ್ ಗೌಡ ಪಾಟೀಲ 17ಕ್ಕೆ2, ಕಿಶನ್ ಎನ್‌.ಎಸ್‌. 21ಕ್ಕೆ2, ಶ್ರೇಯಸ್ ಎಸ್‌.ಪಿ 17ಕ್ಕೆ2). ಫಲಿತಾಂಶ:ಫ್ರೆಂಡ್ಸ್ ಯೂನಿಯನ್ ಸಿಸಿಗೆ 33 ರನ್‌ಗಳ ಜಯ.

ಸೆಂಚುರಿ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 7ಕ್ಕೆ 286 (ಆದರ್ಶ್‌ ರಂಗಪ್ಪ 48, ವೇದಾಂತ್ ಅಯ್ಯರ್‌ 47, ಸಯಾನ್ ಸಾತ್ವಿಕ್ ಔಟಾಗದೆ 101; 103 ಎ, 8 ಬೌಂ, 3 ಸಿ, ನಿಶಾಂತ್ ಕೊಠಾರಿ 38; ಜೀವನ್ 42ಕ್ಕೆ2, ಆಶಿಶ್‌ ವಿಕಾಸ್ 53ಕ್ಕೆ2); ಜಾಲಿ ಕ್ರಿಕೆಟರ್ಸ್‌: 30.1 ಓವರ್‌ಗಳಲ್ಲಿ 148 (ಹೇಮಂತ್‌ 50, ಅಭಿನಯ್ ರಂಗಪ್ಪ 31ಕ್ಕೆ3, ಧೀರಜ್ ಗೌಡ 21ಕ್ಕೆ4). ಫಲಿತಾಂಶ: ಸೆಂಚುರಿ ಕ್ರಿಕೆಟರ್ಸ್‌ಗೆ 138 ರನ್‌ಗಳ ಜಯ.

ಜುಪಿಟರ್ ಕ್ರಿಕೆಟರ್ಸ್‌: 42.2 ಓವರ್‌ಗಳಲ್ಲಿ 153 (ಸ್ಮರಣ್ ರಮೇಶ್ 32, ಸರ್ವೇಶ್‌ ರಾಜು 40, ನಿಶ್ಚಿತ್ ಕಿಣಿ 25; ಅನಿರುದ್ಧ ರಾವ್ 38ಕ್ಕೆ2, ಸುಷ್ಮೀಂದ್ರ್ ಆಚಾರ್ 27ಕ್ಕೆ4, ಸಂಕೇತ್‌ 20ಕ್ಕೆ2); ಜವಾಹರ್ ಸ್ಪೋರ್ಟ್ಸ್‌ ಕ್ಲಬ್‌ (1): 26.3 ಓವರ್‌ಗಳಲ್ಲಿ 1 ವಿಕೆಟ್‌ಗೆ 155 (ಆಮೋದ್ ಎಸ್‌ ಕಾಲುವೆ ಔಟಾಗದೆ 67, ಲಂಕೇಶ್‌ ಔಟಾಗದೆ 54). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್‌ ಕ್ಲಬ್‌ಗೆ 9 ವಿಕೆಟ್‌ಗಳ ಜಯ.

ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌: 47.1 ಓವರ್‌ಗಳಲ್ಲಿ 233 (ಶ್ರೇಯ್‌ ಸಿಂಗ್‌ 36, ರಾಜವೀರ್‌ ವಾಧ್ವಾ 83, ಅಮಯ್‌ ತೇಜಸ್‌ 75; ಶಶಿಕುಮಾರ್ 49ಕ್ಕೆ2, ಅಭಿಮಾನ್ ಜೇಕಬ್ 22ಕ್ಕೆ3, ವಿಕಾಸ್ 12ಕ್ಕೆ2); ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್ ಕ್ಲಬ್‌: 39.1 ಓವರ್‌ಗಳಲ್ಲಿ 3ಕ್ಕೆ 238 (ಜಸ್ಪೆರ್ ಔಟಾಗದೆ 120, ವಿಕಾಸ್ 53). ಫಲಿತಾಂಶ: ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್ ಕ್ಲಬ್‌ಗೆ 7 ವಿಕೆಟ್‌ಗಳ ಜಯ.

ಎಂಗ್ರೇಡ್ಸ್‌ ಕ್ರಿಕೆಟ್ ಕ್ಲಬ್‌: 30 ಓವರ್‌ಗಳಲ್ಲಿ 93 (ಜೈದ್ ಮೆಹ್ರಾನ್ 34; ಮಹೇಂದ್ರ ಕುಮಾರ್ 13ಕ್ಕೆ3, ತೇಜಸ್ ಅಂಗಡಿ 24ಕ್ಕೆ 5); ಫ್ರೆಂಡ್ಸ್ ಯೂನಿಯನ್ ಸಿಸಿ (1): 16.2 ಓವರ್‌ಗಳಲ್ಲಿ 4ಕ್ಕೆ 97 (ಲೋಚನ್ ಗೌಡ 59; ರಾಮಾಂಜಿ 21ಕ್ಕೆ2ಮ ಮನೋಜ್ ಕುಮಾರ್ 36ಕ್ಕೆ2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್‌ಗೆ 6 ವಿಕೆಟ್‌ಗಳ ಜಯ.

ರಾಜಾಜಿನಗರ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 8ಕ್ಕೆ 251 (ನಿಖಿಲ್ ಆರ್‌.ವಿ 45, ನಿತೀಶ್ ಗೌಡ ಔಟಾಗದೆ 81; ಪ್ರೀತಮ್ 43ಕ್ಕೆ3, ಭಿಷ್‌ರಾಜ್ 37ಕ್ಕೆ2); ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌: 39.1 ಓವರ್‌ಗಳಲ್ಲಿ 99 (ಆರವ್ ಶ್ರೀಯಾನ್‌ 31; ಸಾತ್ವಿಕ್ 19ಕ್ಕೆ2, ಶಿಶಿರ್ ಎಚ್‌.ಆರ್‌ 18ಕ್ಕೆ 4, ಆರ್ಷಿಲ್ 25ಕ್ಕೆ3). ರಾಜಾಜಿನಗರ ಕ್ರಿಕೆಟರ್ಸ್‌ಗೆ 152 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.