ADVERTISEMENT

ಜುಲೈನಲ್ಲಿ ಭಾರತ–ಶ್ರೀಲಂಕಾ ಕ್ರಿಕೆಟ್ ಸರಣಿ: ಗಂಗೂಲಿ

ಪಿಟಿಐ
Published 9 ಮೇ 2021, 19:30 IST
Last Updated 9 ಮೇ 2021, 19:30 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ಕೋಲ್ಕತ್ತ: ಭಾರತ ಕ್ರಿಕೆಟ್ ತಂಡವು ಜುಲೈನಲ್ಲಿ ಶ್ರೀಲಂಕಾದಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

‘ಜುಲೈನಲ್ಲಿ ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯು ಶ್ರೀಲಂಕಾದಲ್ಲಿ ಆಯೋಜನೆಗೊಳ್ಳಲಿದೆ. ಅದರಲ್ಲಿ ಭಾರತ ತಂಡವು ಆಡುವುದು‘ ಎಂದು ಭಾನುವಾರ ತಿಳಿಸಿದ್ದಾರೆ.

ಆದರೆ, ಈ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಕೆಲವು ಪ್ರಮುಖರು ತಂಡದಲ್ಲಿ ಇರುವುದಿಲ್ಲ. ಅದೇ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೂ ನಡೆಯಲಿದ್ದು ತಂಡವು ಅಲ್ಲಿ ಆಡಲಿದೆ. ಸೆಪ್ಟೆಂಬರ್‌ 14ರಂದು ಟೆಸ್ಟ್ ಸರಣಿ ಮುಕ್ತಾಯವಾಗುತ್ತದೆ.

ADVERTISEMENT

‘ಶ್ವೇತವರ್ಣದ ಚೆಂಡಿನ ಕ್ರಿಕೆಟ್ ಪರಿಣತರ ತಂಡವನ್ನು ನಾವು ರಚಿಸುತ್ತೇವೆ. ಅದು ಪ್ರತ್ಯೇಕವಾದ ತಂಡವಾಗಿರುತ್ತೆ’ ಎಂದು ಗಂಗೂಲಿ ಸ್ಪಷ್ಟಪಡಿಸಿದರು. ಇದರೊಂದಿಗೆ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಮಾದರಿ ಕ್ರಿಕೆಟ್‌ಗಳಿಗೆ ಪ್ರತ್ಯೇಕ ತಂಡಗಳ ರಚನೆಗೂ ಒತ್ತು ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.