ವಿಯಾನ್ ಮಲ್ಡರ್
ಬುಲಾವಯೊ (ಜಿಂಬಾಬ್ವೆ): ದಕ್ಷಿಣ ಆಫ್ರಿಕಾ ತಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೂರನೇ ದಿನವಾದ ಮಂಗಳವಾರ ಜಿಂಬಾಬ್ವೆ ತಂಡವನ್ನು ಇನಿಂಗ್ಸ್ ಮತ್ತು 236 ರನ್‌ಗಳಿಂದ ಸುಲಭವಾಗಿ ಮಣಿಸಿತು.
ಪ್ರಮುಖರ ಅನುಪಸ್ಥಿತಿಯಲ್ಲಿ ಎರಡನೇ ಹಂತದ ತಂಡವನ್ನು ಕಣಕ್ಕಿಳಿಸಿದರೂ ದಕ್ಷಿಣ ಆಫ್ರಿಕಾ ಗೆಲ್ಲಲು ಪ್ರಯಾಸಪಡಲಿಲ್ಲ.
ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ದಕ್ಷಿಣ ಆಫ್ರಿಕಾದ 626 ರನ್ (5 ವಿಕೆಟ್‌ಗೆ ಡಿಕ್ಲೇರ್)ಗಳಿಗೆ ಉತ್ತರವಾಗಿ 170 ರನ್ನಿಗೆ ಉರುಳಿ ಫಾಲೋಆನ್‌ಗೆ ಒಳಗಾಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಜಿಂಬಾಬ್ವೆ 220 ರನ್‌ಗಳಿಗೆ ಆಲೌಟ್ ಆಯಿತು.
ಸರಣಿಯನ್ನು ಪ್ರವಾಸಿಗರು 2–0 ಯಿಂದ ಗೆದ್ದುಕೊಂಡರು ಇದು ಹರಿಣಪಡೆಗೆ ಸತತ 10ನೇ ಟೆಸ್ಟ್ ಜಯ. ಈ ಹಿಂದೆ 2001 ರಿಂದ 2003ರ ಅವಧಿಯಲ್ಲಿ ಸತತವಾಗಿ 9 ಪಂದ್ಯಗಳನ್ನು ಗೆದ್ದುಕೊಂಡಿದ್ದ ದಾಖಲೆಯನ್ನು ಸುಧಾರಿಸಿತು.
ಸ್ಕೋರುಗಳು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 5ಕ್ಕೆ626 ಡಿ; ಜಿಂಬಾಬ್ವೆ: 170 ಮತ್ತು ಎರಡನೇ ಇನಿಂಗ್ಸ್: (ಫಾಲೊಆನ್) 77.3 ಓವರುಗಳಲ್ಲಿ 220 (ತಾಕುದ್ಜವನಾಶೆ ಕೈತಾನೊ 40, ನಿಕ್ ವೆಲ್ಚ್ 55, ಕ್ರೇಗ್ ಇರ್ವಿನ್ 49; ಕಾರ್ಬಿನ್ ಬಾಷ್ 38ಕ್ಕೆ4, ಕೋಡಿ ಯೂಸುಫ್ 38ಕ್ಕೆ2, ಸೆನುರಾನ್ ಮುತ್ತುಸಾಮಿ 77ಕ್ಕೆ3).
ಪಂದ್ಯದ ಆಟಗಾರ: ವಿಯಾನ್ ಮಲ್ಡರ್ (367*)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.