ADVERTISEMENT

ಪ್ರಿಟೋರಿಯಸ್, ರಿವಾಲ್ಡೊ ಶತಕ: ಭಾರತ ಎ ತಂಡಕ್ಕೆ 2–1ರಿಂದ ಸರಣಿ ಗೆಲುವು

ಪಿಟಿಐ
Published 19 ನವೆಂಬರ್ 2025, 13:50 IST
Last Updated 19 ನವೆಂಬರ್ 2025, 13:50 IST
ದಕ್ಷಿಣ ಆಫ್ರಿಕಾ ಎ ತಂಡದ ಲುವಾನ್ ಡ್ರೆ ಪ್ರಿಟೋರಿಯಸ್  ಬ್ಯಾಟಿಂಗ್‌   –ಪಿಟಿಐ ಚಿತ್ರ
ದಕ್ಷಿಣ ಆಫ್ರಿಕಾ ಎ ತಂಡದ ಲುವಾನ್ ಡ್ರೆ ಪ್ರಿಟೋರಿಯಸ್  ಬ್ಯಾಟಿಂಗ್‌   –ಪಿಟಿಐ ಚಿತ್ರ   

ರಾಜ್‌ಕೋಟ್: ಉದಯೋನ್ಮುಖ ಆಟಗಾರ ಲುವಾನ್ ಡ್ರೆ ಪ್ರಿಟೋರಿಯಸ್ ಅವರ ಅಮೋಘ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ಎ ತಂಡವು ಭಾರತ ಎ ವಿರುದ್ಧದ  ‘ಏಕದಿನ’ ಕ್ರಿಕೆಟ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಇದರೊಂದಿಗೆ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸೋಲು ಕೂಡ ತಪ್ಪಿಸಿಕೊಂಡಿತು. ಭಾರತ ಎ ತಂಡವು 2–1ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು. 

ಬುಧವಾರ ನಡೆದ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫಿಕಾ ಎ ತಂಡವು 73 ರನ್‌ಗಳಿಂದ ಗೆದ್ದಿತು. ಪ್ರಿಟೋರಿಯಸ್ (123; 98ಎಸೆತ) ಮತ್ತು ರಿವಾಲ್ಡೊ ಮೂನಸಾಮಿ (107; 130ಎ) ಅವರು ಜೊತೆಯಾಟದಲ್ಲಿ 241 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 325 ರನ್ ಗಳಿಸಿತು. 

ADVERTISEMENT

ಇದಕ್ಕುತ್ತರವಾಗಿ ಭಾರತ ಎ ತಂಡಕ್ಕೆ 49.1 ಓವರ್‌ಗಳಲ್ಲಿ 252 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. 

19 ವರ್ಷದ ಪ್ರಿಟೋರಿಯಸ್ ಅವರನ್ನು ಐಪಿಎಲ್‌ನಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡವು ಉಳಿಸಿಕೊಂಡಿದೆ. 

ಅವರು ಭಾರತ ಎ ತಂಡದ ಎದುರು 125.51ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಅವರು ಈ ಋತುವಿನ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 863 ರನ್ ಪೇರಿಸಿದ್ದಾರೆ. 

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ ಎ : 50 ಓವರ್‌ಗಳಲ್ಲಿ 6ಕ್ಕೆ325 (ಲಹುವಾನ್ ಡ್ರೆ ಪ್ರಿಟೋರಿಯಸ್ 123, ರಿವಾಲ್ಡೊ ಮೂನಸಾಮಿ 107)

ಭಾರತ ಎ: 49.1 ಓವರ್‌ಗಳಲ್ಲಿ 252 (ಆಯುಷ್ ಬದೋನಿ 66, ಇಶಾನ್ ಕಿಶನ್ 53, ಎನ್‌ಕಾಬೆಯೊಮಝಿ ಪೀಟರ್ 48ಕ್ಕೆ4)

ಫಲಿತಾಂಶ: ದಕ್ಷಿಣ ಆಫ್ರಿಕಾ ಎ ತಂಡಕ್ಕೆ 73 ರನ್‌ಗಳಿಂದ ಜಯ. ಭಾರತ ಎ ತಂಡಕ್ಕೆ 2–1ರಿಂದ ಸರಣಿ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.