ADVERTISEMENT

14 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಟೆಸ್ಟ್ ಆಡಲಿರುವ ದಕ್ಷಿಣ ಆಫ್ರಿಕಾ

ಏಜೆನ್ಸೀಸ್
Published 16 ಜನವರಿ 2021, 11:02 IST
Last Updated 16 ಜನವರಿ 2021, 11:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ತಂಡದ ವಿರುದ್ಧದ ಸರಣಿಯಲ್ಲಿ ಆಡಲು ದಕ್ಷಿಣ ಆಫ್ರಿಕಾ ತಂಡವು ಶನಿವಾರ ಕರಾಚಿಗೆ ಬಂದಿಳಿಯಿತು. ಹರಿಣ ಪಡೆ ಸುಮಾರು 14 ವರ್ಷಗಳ ನಂತರ ಪಾಕ್‌ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ದಕ್ಷಿಣ ಆಫ್ರಿಕಾ ತಂಡವು 2007ರ ವರ್ಷಾಂತ್ಯದಲ್ಲಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು. ಆಗ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1–0ಯಿಂದ ಗೆದ್ದುಕೊಂಡಿತ್ತು.

ಇದಾದ ಬಳಿಕ ಪಾಕಿಸ್ತಾನ ತಂಡವು 2010 ಹಾಗೂ 2013ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ದಕ್ಷಿಣ ಆಫ್ರಿಕಾ ತಂಡದ ಎದುರು ಆಡಿತ್ತು.

ADVERTISEMENT

2009ರಲ್ಲಿ ಲಾಹೋರ್‌ನಲ್ಲಿ ಪ್ರವಾಸಿ ಶ್ರೀಲಂಕಾ ಕ್ರಿಕೆಟ್‌ ತಂಡದ ಬಸ್‌ ಮೇಲೆ ನಡೆದ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ತಂಡವು ಸುರಕ್ಷತೆಯ ದೃಷ್ಟಿಯಿಂದ ಯುಎಇಯಲ್ಲಿ ತವರಿನ ಪಂದ್ಯಗಳನ್ನು ಆಡಬೇಕಾಯಿತು.

ಸದ್ಯದ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ತಂಡವು ಕರಾಚಿ (ಜನೆವರಿ 26–30) ಹಾಗೂ ರಾವಲ್ಪಿಂಡಿಯಲ್ಲಿ (ಫೆಬ್ರುವರಿ 4–8) ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಫೆಬ್ರುವರಿ 11ರಿಂದ ಲಾಹೋರ್‌ನಲ್ಲಿ ನಿಗದಿಯಾಗಿರುವ ಮೂರು ಟ್ವೆಂಟಿ–20 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.