ಸೂರ್ಯಕುಮಾರ್ ಯಾದವ್
(ಚಿತ್ರ ಕೃಪೆ: ಸೂರ್ಯಕುಮಾರ್ ಯಾದವ್ ಇನ್‌ಸ್ಟಾಗ್ರಾಂ)
ನವದೆಹಲಿ: ಭಾರತದ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ 'ಸ್ಪೋರ್ಟ್ಸ್ ಹರ್ನಿಯಾ' ನೋವಿಗೆ ಸಂಬಂಧಿಸಿದಂತೆ ಜರ್ಮನಿಯ ಮ್ಯೂನಿಚ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿದೆ.
ಈ ಕುರಿತು ಸ್ವತಃ ಸೂರ್ಯಕುಮಾರ್ ಯಾದವ್ ಅವರೇ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಸಮೇತ ಮಾಹಿತಿ ನೀಡಿದ್ದಾರೆ.
'ಬದುಕಿನ ಅಪ್‌ಡೇಟ್: ಹೊಟ್ಟೆಯ ಕೆಳಗೆ ಬಲಭಾಗದಲ್ಲಿ 'ಸ್ಫೋಟ್ಸ್ ಹರ್ನಿಯಾ' ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಶಸ್ತ್ರಚಿಕಿತ್ಸೆಯ ಯಶಸ್ಸಿನ ನಂತರ ನಾನು ಈಗಾಗಲೇ ಚೇತರಿಕೆಯ ಹಂತದಲ್ಲಿದ್ದೇನೆ. ಮತ್ತೆ ಮೈದಾನಕ್ಕಿಳಿಯಲು ಕಾತರದಲ್ಲಿದ್ದೇನೆ' ಎಂದು ತಿಳಿಸಿದ್ದಾರೆ.
ಪುನಶ್ಚೇತನ ಶಿಬಿರದ ಭಾಗವಾಗಿ ಸೂರ್ಯಕುಮಾರ್ ಯಾದವ್ ಮುಂದಿನ ಎರಡು ವಾರಗಳಲ್ಲಿ ಬೆಂಗಳೂರಿನಲ್ಲಿರುವ ಬಿಸಿಸಿಐ 'ಸೆಂಟರ್ ಎಫ್ ಎಕ್ಸಲೆನ್ಸ್'ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಭಾರತ ತಂಡವು ಆಗಸ್ಟ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಲ್ಲಿ ಭಾಗವಹಿಸಲಿದೆ. ಈ ವೇಳೆಯಾಗುವಾಗ ಸೂರ್ಯಕುಮಾರ್ ಯಾದವ್ ಫಿಟ್ ಆಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.