ADVERTISEMENT

ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯ; ಫಾಲೊ ಆನ್ ಆತಂಕದಲ್ಲಿ ವೆಸ್ಟ್ ಇಂಡೀಸ್

ಜಯವಿಕ್ರಮ, ರಮೇಶ್ ಪರಿಣಾಮಕಾರಿ ಬೌಲಿಂಗ್

ಏಜೆನ್ಸೀಸ್
Published 22 ನವೆಂಬರ್ 2021, 14:29 IST
Last Updated 22 ನವೆಂಬರ್ 2021, 14:29 IST
ದಿನೇಶ್ ಚಾಂಡಿಮಲ್ ಅವರ ಬ್ಯಾಟಿಂಗ್ ಶೈಲಿ –ಪಟಿಐ ಚಿತ್ರ
ದಿನೇಶ್ ಚಾಂಡಿಮಲ್ ಅವರ ಬ್ಯಾಟಿಂಗ್ ಶೈಲಿ –ಪಟಿಐ ಚಿತ್ರ   

ಗಾಲ್‌, ಶ್ರೀಲಂಕಾ: ಉತ್ತಮ ಆರಂಭ ಕಂಡರೂ ನಂತರ ವೈಫಲ್ಯ ಅನುಭವಿಸಿದ ವೆಸ್ಟ್ ಇಂಡೀಸ್ ತಂಡ ಶ್ರಿಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಫಾಲೊ ಆನ್ ಭೀತಿಯಲ್ಲಿದೆ. ಆತಿಥೇಯರು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿರುವ 386 ರನ್‌ಗಳಿಗೆ ಉತ್ತರಿಸಿದ ‌ಪ್ರವಾಸಿ ತಂಡ ಎರಡನೇ ದಿನವಾದ ಸೋಮವಾರ ಆಟದ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿದ್ದಾರೆ.

ಕ್ರೆಗ್ ಬ್ರಾಥ್‌ವೇಟ್ (41; 115 ಎಸೆತ, 7 ಬೌಂಡರಿ) ಮತ್ತು ಜರ್ಮೈನ್ ಬ್ಲ್ಯಾಕ್‌ವುಡ್ ಮೊದಲ ವಿಕೆಟ್‌ಗೆ 46 ರನ್ ಸೇರಿಸಿ ಭರವಸೆ ಮೂಡಿಸಿದ್ದರು. ಜರ್ಮೈನ್ ವಿಕೆಟ್ ಉರುಳಿದ ನಂತರ ತಂಡ ಪತನದತ್ತ ಸಾಗಿತು. 100 ರನ್ ಗಳಿಸಿದ್ದಾಗ ಆರನೇ ವಿಕೆಟ್ ಕಳೆದುಕೊಂಡ ತಂಡಕ್ಕೆ ಕೈಲ್ ಮೇಯರ್ಸ್ ಮತ್ತು ಜೇಸನ್ ಹೋಲ್ಡರ್ ಆಸರೆಯಾಗಿದ್ದಾರೆ.‌

ನಾಯಕ ದಿಮುತ್ ಕರುಣರತ್ನೆ (147; 300 ಎ, 15 ಬೌಂ) ಅವರ ಶತಕದ ನೆರವಿನಿಂದ ಮೊದಲ ದಿನ ಶ್ರೀಲಂಕಾ 88 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 267 ರನ್ ಗಳಿಸಿತ್ತು. ಭಾನುವಾರ ದಿಮುತ್ ಜೊತೆ ಕ್ರೀಸ್‌ನಲ್ಲಿದ್ದ ಧನಂಜಯ ಸಿಲ್ವಾ (61; 85 ಎ, 5 ಬೌಂ) ಬೇಗನೇ ಔಟಾದರು. ನಂತರ ದಿನೇಶ್ ಚಾಂಡಿಮಲ್ (45; 83 ಎ, 5 ಬೌಂ) ಮಿಂಚಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ,ಮೊದಲ ಇನಿಂಗ್ಸ್‌:(ಭಾನುವಾರ 88 ಓವರ್‌ಗಳಲ್ಲಿ 3ಕ್ಕೆ 267) 133.5 ಓವರ್‌ಗಳಲ್ಲಿ 386 (ದಿಮುತ್ ಕರುಣರತ್ನೆ 147, ಧನಂಜಯ ಡಿ ಸಿಲ್ವಾ 61, ದಿನೇಶ್ ಚಾಂಡಿಮಲ್ 45; ಶಾನಾನ್ ಗ್ಯಾಬ್ರಿಯಲ್‌ 69ಕ್ಕೆ2, ಜೊಮೆಲ್ ವಾರಿಕನ್87ಕ್ಕೆ3, ರಾಸ್ಟನ್ ಚೇಸ್‌ 83ಕ್ಕೆ5). ವೆಸ್ಟ್ ಇಂಡೀಸ್, ಮೊದಲ ಇನಿಂಗ್ಸ್‌: 42 ಓವರ್‌ಗಳಲ್ಲಿ 6ಕ್ಕೆ 113 (ಕ್ರೆಗ್ ಬ್ರಾಥ್‌ವೇಟ್ 41, ಜೆರೆಮಿ ಬ್ಲ್ಯಾಕ್‌ವುಡ್ 20, ಕೈಲ್ ಮೇಯರ್ಸ್‌ ಬ್ಯಾಟಿಂಗ್ 22, ಜೇಸನ್ ಹೋಲ್ಡರ್ ಬ್ಯಾಟಿಂಗ್ 1; ಲಸಿತ್ ಎಂಬುಲ್ದೇನಿಯ 39ಕ್ಕೆ1, ಪ್ರವೀಣ್ ಜಯವಿಕ್ರಮ 25ಕ್ಕೆ2, ರಮೇಶ್ ಮೆಂಡಿಸ್‌ 23ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.