ADVERTISEMENT

ಅಲ್ಪ ಮೊತ್ತಕ್ಕೆ ಕುಸಿದ ಶ್ರೀಲಂಕಾ: ಅಫ್ಗಾನ್‌ ಗೆಲುವಿಗೆ 187 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 15:47 IST
Last Updated 4 ಜೂನ್ 2019, 15:47 IST
   

ಕಾರ್ಡಿಫ್‌: ಬ್ಯಾಟಿಂಗ್‌ ವೈಫಲ್ಯದಿಂದ ಹೊರಬಂದಂತೆ ಕಂಡು ಬಂದ ಶ್ರೀಲಂಕಾ ತಂಡ ಅಫ್ಗಾನಿಸ್ತಾನದ ವಿರುದ್ಧ ಬೃಹತ್‌ ಮೊತ್ತ ಪೇರಿಸುವ ನಿರೀಕ್ಷೆ ಸೃಷ್ಟಿಸಿತು. ಆದರೆ, ತಂಡದ ಮೊತ್ತ 100ರ ಗಡಿ ದಾಟಿ ಕೆಲವೇ ನಿಮಿಷಗಳ ಅಂತರದಲ್ಲಿ ಸರಣಿ ವಿಕೆಟ್‌ಗಳು ಉರುಳಿದವು.ಮಳೆಯ ಕಾರಣದಿಂದಾಗಿ ಪಂದ್ಯವನ್ನು 41 ಓವರ್‌ಗಳಿಗೆ ಮಿತಿಗೊಳಿಸಲಾಗಿದ್ದು, ಡಕ್ವರ್ಥ್ ಲೂಯಿಸ್‌ ನಿಯಮದಡಿ ಅಫ್ಗಾನ್‌ ಗೆಲ್ಲಲು 187ರನ್‌ ಗಳಿಸಬೇಕಿದೆ.

ಕ್ಷಣಕ್ಷಣದ ಸ್ಕೋರ್‌:https://bit.ly/2wzHipB

ಅಫ್ಗಾನಿಸ್ತಾನ ಮತ್ತೆ ತನ್ನ ಬೌಲಿಂಗ್‌ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ. ಟಾಸ್‌ ಗೆದ್ದ ಅಫ್ಗಾನಿಸ್ತಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಭರ್ಜರಿ ಆಟವಾಡಿದ ಲಂಕಾ ಬ್ಯಾಟ್ಸ್‌ಮನ್‌ಗಳನ್ನು ಬಹುಬೇಗನೇ ನಿಯಂತ್ರಿಸುವಲ್ಲಿ ಅಫ್ಗಾನ್‌ ಬೌಲರ್‌ಗಳು ಸಫಲರಾದರು. ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡುವ ಮುನ್ನಶ್ರೀಲಂಕಾ 33 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತ್ತು. ಮತ್ತೆ ಶುರುವಾದ ಬ್ಯಾಟಿಂಗ್‌ ಬಹುಕಾಲ ಸಾಗಲಿಲ್ಲ. 36.5 ಓವರ್‌ಗಳಲ್ಲಿಎಲ್ಲ ವಿಕೆಟ್‌ ನಷ್ಟಕ್ಕೆ ಶ್ರೀಲಂಕಾ 201 ರನ್‌ ಗಳಿಸಿತು.

ADVERTISEMENT

ಮೊಹಮದ್‌ ನಾಬಿ ಎಸೆತಗಳಲ್ಲಿ ರನ್‌ ಗಳಿಸಲು ಲಂಕಾ ಬೌಲರ್‌ಗಳು ಪರದಾಡಿದರು. 9 ಓವರ್‌ಗಳಲ್ಲಿ 30 ರನ್‌ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ಮಧ್ಯಕ್ರಮಾಂಕ ಬಹುಬೇಗ ಕುಸಿಯಲು ಕಾರಣವಾದರು. 11 ಓವರ್‌ಗಳ ಅಂತರದಲ್ಲಿ 36 ರನ್‌ ಹಾಗೂ 7 ವಿಕೆಟ್‌ಗಳು ಪತನಗೊಂಡವು.

ಉತ್ತಮ ಪ್ರದರ್ಶನ ನೀಡುತ್ತಿದ್ದಕುಶಾಲ್ ಪೆರೇರಾ(78) ಆಟಕ್ಕೆ ರಶೀದ್‌ ಖಾನ್‌ ಕಡಿವಾಣ ಹಾಕಿದರು.

ತಂಡಗಳು:

ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವ, ಆವಿಷ್ಕ ಫರ್ನಾಂಡೊ, ಸುರಂಗ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್‌, ಕುಶಾಲ್ ಮೆಂಡಿಸ್‌, ಜೀವನ್ ಮೆಂಡಿಸ್‌, ಕುಶಾಲ್ ಪೆರೇರಾ (ವಿಕೆಟ್ ಕೀಪರ್), ತಿಸಾರ ಪೆರೇರಾ, ನುವಾನ್ ಪ್ರದೀಪ್, ಮಿಲಿಂದ ಸಿರಿವರ್ಧನ, ಲಾಹಿರು ತಿರಿಮನೆ, ಇಸುರು ಉದಾನ, ಜೆಫ್ರಿ ವಂಡರ್ಸೆ

ಅಫ್ಗಾನಿಸ್ತಾನ: ಗುಲ್ಬದಿನ್ ನಯೀಬ್ (ನಾಯಕ), ಅಸ್ಗರ್ ಅಫ್ಗಾನ್, ಅಫ್ತಾಬ್ ಆಲಂ, ನೂರ್ ಅಲಿ ಜದ್ರಾನ್, ಹಮೀದ್ ಹಸನ್, ರಶೀದ್ ಖಾನ್, ಮೊಹಮ್ಮದ್ ನಬಿ, ರಹಮತ್ ಶಾ, ಹಶ್ಮತ್ ಉಲ್ಲಾ ಶಾಹಿದಿ, ಮೊಹಮ್ಮದ್ ಶೆಹಜಾದ್ (ವಿಕೆಟ್ ಕೀಪರ್), ಶಮೀವುಲ್ಲಾ ಶಿನ್ವಾರಿ, ಮುಜೀಬ್ ಉರ್ ರೆಹಮಾನ್, ದೌಲತ್ ಜದ್ರಾನ್, ನಜೀಬುಲ್ಲ ಜದ್ರಾನ್, ಹಜ್ರತ್ ಜಜಾಯ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.