ADVERTISEMENT

ಸ್ಟಂಪ್‌ಗೆ ನೇರವಿರುವ ಎಸೆತಗಳು ಎಲ್‌ಬಿಗೆ ಅರ್ಹ: ಚಾಪೆಲ್

ಪಿಟಿಐ
Published 10 ಮೇ 2020, 19:45 IST
Last Updated 10 ಮೇ 2020, 19:45 IST
ಇಯಾನ್ ಚಾಪೆಲ್
ಇಯಾನ್ ಚಾಪೆಲ್   

ನವದೆಹಲಿ : ಕ್ರಿಕೆಟ್‌ನಲ್ಲಿ ಎಲ್‌ಬಿಡಬ್ಲ್ಯು ತೀರ್ಮಾನಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಇಯಾನ್ ಚಾಪೆಲ್ ಮಹತ್ವದ ಸಲಹೆ ನೀಡಿದ್ದಾರೆ.

‘ಬೌಲರ್ ಹಾಗುವ ಎಸೆತವು ಸ್ಟಂಪ್‌ಗಳಿಗೆ ನೇರವಾಗಿ ಚಲಿಸುತ್ತಿದ್ದು, ಬ್ಯಾಟ್‌ಗೆ ತಗುಲದೇ ಪ್ಯಾಡ್‌ಗೆ ಅಪ್ಪಳಿಸಿದರೆ ಎಲ್‌ಬಿಡಬ್ಲ್ಯು ಎಂದು ಘೋಷಿಸಬೇಕು. ಲೈನ್‌ನಿಂದ ಹೊರಗಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸಬಾರದು’ ಎಂದು ಹೇಳಿದ್ದಾರೆ.

‘ಪ್ಯಾಡ್‌ಗಳಿರುವುದು ಬ್ಯಾಟ್ಸ್‌ಮನ್‌ಗೆ ಗಾಯವಾಗದಂತೆ ರಕ್ಷಿಸಲು. ಆದರೆ ಆತನು ವಿಕೆಟ್‌ ಬೀಳದಂತೆ ರಕ್ಷಿಸಿಕೊಳ್ಳಲು ಅಲ್ಲ. ಬ್ಯಾಟ್‌ನಿಂದ ಮಾತ್ರ ಆ ಕೆಲಸವನ್ನು ಬ್ಯಾಟ್ಸ್‌ಮನ್ ಮಾಡಬೇಕು. ಬೌಲರ್‌ ಬ್ಯಾಟ್‌ ಚೆಂಡನ್ನು ಸ್ಪರ್ಶವನ್ನು ತಪ್ಪಿಸಿ ಸ್ಟಂಪ್‌ಗೆ ನೇರವಾಗಿ ನುಗ್ಗುವಂತೆ ಬೌಲಿಂಗ್ ಮಾಡಬೇಕು’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.