ADVERTISEMENT

ಭಾರತ–ಪಾಕಿಸ್ತಾನ ನಡುವೆ ಪೈಪೋಟಿಯೇ ಇಲ್ಲ: ಸೂರ್ಯಕುಮಾರ್ ಯಾದವ್ ಹೀಗೆ ಹೇಳಿದ್ಯಾಕೆ?

ಪಿಟಿಐ
Published 22 ಸೆಪ್ಟೆಂಬರ್ 2025, 2:25 IST
Last Updated 22 ಸೆಪ್ಟೆಂಬರ್ 2025, 2:25 IST
   

ದುಬೈ: ಇಲ್ಲಿ ನಡೆದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ತಂಡ 6 ವಿಕೆಟ್‌ಗಳಿಂದ ಸೋಲಿಸಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆಯನ್ನು ಅರ್ಥಪೂರ್ಣ ಪೈಪೋಟಿ ಎಂದು ಕರೆಯುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಟಿ20ಯಲ್ಲಿ 15 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ಆ ಮುಖಾಮುಖಿಗಳಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಭಾರತ ತಂಡ 12 ಬಾರಿ ಗೆದ್ದಿದೆ ಎಂದಿದ್ದಾರೆ.

ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರು ಎರಡೂ ತಂಡಗಳ ನಡುವಿನ ಆಟದ ಸ್ಟ್ಯಾಂಡರ್ಡ್ ಬಹಳಷ್ಟು ಬದಲಾಗಿದೆಯೇ ಎಂದು ಕೇಳಿದಾಗ, ನಗುತ್ತಾ ಉತ್ತರಿಸಿದ ಸೂರ್ಯಕುಮಾರ್, ‘ಸರ್, ನನ್ನ ವಿನಂತಿಯೆಂದರೆ ನಾವು ಈಗ ಭಾರತ vs ಪಾಕಿಸ್ತಾನ ಪಂದ್ಯಗಳನ್ನು ಪೈಪೋಟಿ ಎಂದು ಕರೆಯುವುದನ್ನು ನಿಲ್ಲಿಸಬೇಕು’ ಎಂದಿದ್ದಾರೆ.

ADVERTISEMENT

'ಸರ್, ಪೈಪೋಟಿ ಮತ್ತು ಸ್ಟ್ಯಾಂಡರ್ಡ್ ಎಲ್ಲವೂ ಒಂದೇ. ಈಗ ಪೈಪೋಟಿ ಎಲ್ಲಿದೆ? ಎರಡೂ ತಂಡಗಳು 15 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8-7 ಪಂದ್ಯಗಳಲ್ಲಿ ಗೆಲುವು ಕಂಡಿದ್ದರೆ ಅದು ಪೈಪೋಟಿ. ಇಲ್ಲಿ ಭಾರತ 12ಕ್ಕೂ ಹೆಚ್ಚು ಪಂದ್ಯ ಗೆದ್ದಿದ್ದು ಸ್ಪರ್ದೆಯೇ ಇಲ್ಲ’ಎಂದು ಹೇಳಿ ಸೂರ್ಯ ನಗುತ್ತಾ ಹೊರನಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.