ಬೆಂಗಳೂರು: ಬ್ಯಾಟರ್ ಡಿ. ನಿಶ್ಚಲ್ (107, 156ಎಸೆತ, 4X19) ಅವರು ಚೆಂದದ ಶತಕ ಗಳಿಸಿದರು. ಆದರೂ ಸಸ್ಸೆಕ್ಸ್ ಕ್ಲಬ್ ವಿರುದ್ಧ ಕೆಎಸ್‌ಸಿಎ ಇಲೆವನ್ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು.
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕೌಂಟಿ ಕ್ರಿಕೆಟ್ ಕ್ಲಬ್ ಸಸ್ಸೆಕ್ಸ್ ಎದುರು ಗುರುವಾರ ಆರಂಭದ ಪಂದ್ಯದಲ್ಲಿ ಕರ್ನಾಟಕ ತಂಡವು 49.1 ಓವರ್‌ಗಳಲ್ಲಿ 201 ರನ್‌ಗಳಣ್ನು ಗಳಿಸಿತು. ಪ್ರವಾಸಿ ತಂಡದ ವೇಗಿ ಡ್ಯಾನಿ ಲ್ಯಾಂಬ್ (25ಕ್ಕೆ4) ಅವರು ಪರಿಣಾಮಕಾರಿ ದಾಳಿ ನಡೆಸಿದರು
ಇದಕ್ಕೆ ಪ್ರತಿಕ್ರಿಯೆಯಾಗಿ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ಬಳಗವು ದಿನದಾಟದ ಮುಕ್ತಾಯಕ್ಕೆ 2 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೆಎಸ್‌ಸಿಎ ಇಲೆವನ್: 49.1 ಓವರ್‌ಗಳಲ್ಲಿ 201 (ಡಿ. ನಿಶ್ಚಲ್ 107, ಡ್ಯಾನಿ ಲ್ಯಾಂಬ್ 25ಕ್ಕೆ4, ಹೆನ್ರಿ ಕ್ರೊಕಾಂಬ್ 23ಕ್ಕೆ2, ಜ್ಯಾಕ್ ಕಾರ್ಸನ್ 49ಕ್ಕೆ2, ಆರ್ಕಿ ಲೆನ್ಹಾಮ್ 37ಕ್ಕೆ2) ಸಸ್ಸೆಕ್ಸ್ : 2 ವಿಕೆಟ್‌ಗಳಿಗೆ 185 (ಟಾಮ್ ಕ್ಲಾರ್ಕ್ 41, ಟಾಮ್ ಅಲ್ಸೂಪ್ ಬ್ಯಾಟಿಂಗ್ 51, ಜೇಮ್ಸ್ ಕೊಲ್ಸ್ ಬ್ಯಾಟಿಂಗ್ 66)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.