ADVERTISEMENT

ಸಯ್ಯದ್‌ ಮುಷ್ತಾಕ್ ಅಲಿ ಟ್ರೋಫಿ: ಬಂಗಾಳ ತಂಡದಲ್ಲಿ ಶಮಿ, ಆಕಾಶ್ ದೀಪ್‌

ಪಿಟಿಐ
Published 22 ನವೆಂಬರ್ 2025, 9:14 IST
Last Updated 22 ನವೆಂಬರ್ 2025, 9:14 IST
   

ಕೋಲ್ಕತ್ತ: ಸಯ್ಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಬಂಗಾಳ ತಂಡವನ್ನು ಪ್ರಕಟಿಸಿದ್ದು, ಭಾರತ ತಂಡದ ಪ್ರಮುಖ ವೇಗದ ಬೌಲರ್‌ಗಳಾದ ಮೊಹಮ್ಮದ್ ಶಮಿ, ಆಕಾಶ್ ದೀಪ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಬಂಗಾಳ ತಂಡವು 17 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಅಭಿಮನ್ಯು ಈಶ್ವರನ್ ತಂಡವನ್ನು ಮುನ್ನಡೆಸಲಿದ್ದಾರೆ.

ಗಾಯದಿಂದ ಚೇತರಿಸಿಕೊಂಡ ಬಳಿಕ ರಣಜಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಮೊಹಮ್ಮದ್‌ ಶಮಿ ಮೊದಲ 4 ಪಂದ್ಯಗಳಲ್ಲಿ 20 ವಿಕೆಟ್‌ ಪಡೆದು ಮಿಂಚಿದ್ದಾರೆ. ಉತ್ತರಾಖಂಡ ಮತ್ತು ಗುಜರಾತ್‌ ವಿರುದ್ದದ ಪಂದ್ಯಗಳಲ್ಲೇ 15 ವಿಕೆಟ್‌ ಕಬಳಿಸಿದ್ದರು. ಸಯ್ಯದ್‌ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚುವ ಮೂಲಕ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಅಭಿಷೇಕ್‌ ಪೋರಲ್‌, ಶಹಬಾಜ್ ಅಹಮದ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಬಂಗಾಳ, ನ.26ರಂದು ಬರೋಡ ವಿರುದ್ದ ಮೊದಲ ಪಂದ್ಯವಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.