
ಪಿಟಿಐ
ಮೆಲ್ಬರ್ನ್: ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಅವರು ವೈಯಕ್ತಿಕ ಕಾರಣಗಳಿಂದ ಭಾರತ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಿಂದ ಹಿಂದೆಸರಿದಿದ್ದಾರೆ. ಅವರ ಬದಲು ಇನ್ನೊಬ್ಬ ಲೆಗ್ ಸ್ಪಿನ್ನರ್ ತನ್ವೀರ್ ಸಂಘಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಮೊದಲ ಪಂದ್ಯ 29ರಂದು ಕೆನ್‌ಬೆರಾದಲ್ಲಿ ನಡೆಯಲಿದೆ. ಮೆಲ್ಬರ್ನ್‌ನಲ್ಲಿ (ಅ. 31), ಹೋಬರ್ಟ್ (ನ. 2), ಗೋಲ್ಡ್‌ಕೋಸ್ಟ್ (ನ. 6) ಮತ್ತು ಬ್ರಿಸ್ಬೇನ್‌ನಲ್ಲಿ (ನ. 8) ಇತರ ನಾಲ್ಕು ಪಂದ್ಯಗಳು ನಿಗದಿಯಾಗಿವೆ.
ಜಂಪಾ ಎರಡನೇ ಮಗುವಿಗೆ ತಂದೆಯಾಗುವ ನಿರೀಕ್ಷೆಯಲ್ಲಿದ್ದು, ಆ ವೇಳೆ ಪತ್ನಿ ಹ್ಯಾರಿಯಟ್ ಜತೆಗಿರಲು ನಿರ್ಧರಿಸಿದ್ದಾರೆ.
7 ಪಂದ್ಯಗಳನ್ನಾಡಿರುವ ಸಂಘಾ 10 ವಿಕೆಟ್‌ಗಳನ್ನು ಪಡೆದಿದ್ದಾರೆ. 2023ರಲ್ಲಿ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.