ADVERTISEMENT

ಟಿ20ಐ ವಿಶ್ವಕಪ್ 2026: ಟೂರ್ನಮೆಂಟ್‌ಗೆ ಅರ್ಹತೆ ಪಡೆದುಕೊಂಡ ಅಂತಿಮ 20 ತಂಡಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2025, 11:02 IST
Last Updated 18 ಅಕ್ಟೋಬರ್ 2025, 11:02 IST
<div class="paragraphs"><p>ವಿಶ್ವಕಪ್‌ ಅರ್ಹತೆ ಪಡೆದ ದೇಶಗಳು</p></div>

ವಿಶ್ವಕಪ್‌ ಅರ್ಹತೆ ಪಡೆದ ದೇಶಗಳು

   

ಚಿತ್ರ ಕೃಪೆ: ಐಸಿಸಿ

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ನೇ ಸಾಲಿನ ಟಿ20ಐ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ಪ್ರತಿಷ್ಠಿತ ಟೂರ್ನಿಯ ಕೊನೆಯ ತಂಡವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡ ಅರ್ಹತೆ ಪಡೆದುಕೊಂಡಿದೆ. ಆ ಮೂಲಕ ಏಷ್ಯಾ ಪೆಸಿಫಿಕ್‌(ಏಷ್ಯಾ-ಇಎಪಿ) ಅರ್ಹತಾ ಸುತ್ತಿನಲ್ಲಿ ಪ್ರವೇಶ ಪಡೆದ ಮೂರನೇ ತಂಡವಾಗಿದೆ.

ADVERTISEMENT

ಭಾರತ ಮತ್ತು ಶ್ರೀಲಂಕಾ ತಂಡಗಳು ಆಯೋಜಕರಾಗಿರುವುದರಿಂದ ನೇರ ಅರ್ಹತೆ ಪಡೆದಕೊಂಡಿವೆ. 2024ರ ವಿಶ್ವಕಪ್‌ನಲ್ಲಿ ಅಗ್ರ 7 ಸ್ಥಾನಗಳನ್ನು ಪಡೆದ ಎಲ್ಲಾ 7 ತಂಡಗ ನೇರ ಅರ್ಹತೆ ಪಡೆದಿವೆ. ಜೊತೆಗೆ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ನ ಟಿ-20ಐ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಪಡೆದಿರುವ ಐರ್ಲೆಂಡ್, ಪಾಕಿಸ್ಥಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಹ ನೇರ ಅರ್ಹತೆ ಪಡೆದುಕೊಂಡಿವೆ.

ಉಳಿದ 8 ಸ್ಥಾನಗಳಿಗಾಗಿ ನಡೆದ ಅರ್ಹತಾ ಸುತ್ತುಗಳಲ್ಲಿ ಅಮೆರಿಕಾದಿಂದ ಒಂದು ತಂಡ, ಆಫ್ರಿಕಾ ಮತ್ತು ಯೂರೋಪ್‌ನಿಂದ ತಲಾ ಎರಡು ತಂಡಗಳು. ಏಷ್ಯಾ ಮತ್ತು ಪ್ಯಾಸಿಫಿಕ್‌ನಿಂದ ಮೂರು ತಂಡಗಳು ಅರ್ಹತಾ ಸುತ್ತುಗಳ ಮೂಲಕ ಅಯ್ಕೆಯಾಗಿವೆ. ಸದ್ಯ, ಟಿ20 ವಿಶ್ವಕಪ್ ಆಡಲಿರುವ 20 ತಂಡಗಳು ಯಾವುವು ಎಂಬುದು ಖಚಿತವಾಗಿವೆ.

2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ 20 ತಂಡಗಳು

ತಂಡ – ಅರ್ಹತಾ ಮಾರ್ಗ

  • ಭಾರತ – ಪಂದ್ಯಾವಳಿಯ ಆತಿಥೇಯರು

  • ಶ್ರೀಲಂಕಾ – ಪಂದ್ಯಾವಳಿಯ ಆತಿಥೇಯರು

  • ಅಫ್ಘಾನಿಸ್ತಾನ – ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

  • ಆಸ್ಟ್ರೇಲಿಯಾ – ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

  • ಬಾಂಗ್ಲಾದೇಶ – ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

  • ಇಂಗ್ಲೆಂಡ್– ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

  • ದಕ್ಷಿಣ ಆಫ್ರಿಕಾ– ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

  • ಯುಎಸ್‌ಎ–ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

  • ವೆಸ್ಟ್ ಇಂಡೀಸ್– ಟಿ20 ವಿಶ್ಚಕಪ್ 2024 ರಲ್ಲಿ ಟಾಪ್ 7 ಸ್ಥಾನ

ಐಸಿಸಿ ಪುರುಷರ ಟಿ20 ಶ್ರೇಯಾಂಕದ ಆಧಾರದಲ್ಲಿ

  • ಐರ್ಲೆಂಡ್ – ಐಸಿಸಿ ಪುರುಷರ ಟಿ20 ತಂಡ ಶ್ರೇಯಾಂಕಗಳು

  • ನ್ಯೂಜಿಲೆಂಡ್ – ಐಸಿಸಿ ಪುರುಷರ ಟಿ20 ತಂಡ ಶ್ರೇಯಾಂಕಗಳು

  • ಪಾಕಿಸ್ತಾನ – ಐಸಿಸಿ ಪುರುಷರ ಟಿ20 ತಂಡ ಶ್ರೇಯಾಂಕಗಳು

ಅರ್ಹತಾ ಸುತ್ತಿ ಪಂದ್ಯಗಳ ಮೂಲಕ

  • ಕೆನಡಾ – ಅಮೆರಿಕಾಸ್ ಅರ್ಹತಾ ಪಂದ್ಯ

  • ಇಟಲಿ – ಯುರೋಪ್ ಅರ್ಹತಾ ಪಂದ್ಯ

  • ನೆದರ್ಲ್ಯಾಂಡ್ – ಯುರೋಪ್ ಅರ್ಹತಾ ಪಂದ್ಯ

  • ನಮೀಬಿಯಾ – ಆಫ್ರಿಕಾ ಅರ್ಹತಾ ಪಂದ್ಯ

  • ಜಿಂಬಾಬ್ವೆ – ಆಫ್ರಿಕಾ ಅರ್ಹತಾ ಪಂದ್ಯ

  • ನೇಪಾಳ – ಏಷ್ಯಾ/ಇಎಪಿ ಅರ್ಹತಾ ಸುತ್ತು

  • ಓಮನ್ – ಏಷ್ಯಾ/ಇಎಪಿ ಅರ್ಹತಾ ಸುತ್ತು

  • ಯುಎಇ – ಏಷ್ಯಾ/ಇಎಪಿ ಅರ್ಹತಾ ಸುತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.