ADVERTISEMENT

T20 World Cup: ಪಾಕ್ ವಿರುದ್ಧ ಆಡಲಿದ್ದಾರೆಯೇ ಅಭಿಷೇಕ್?

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
<div class="paragraphs"><p>ಅಭಿಷೇಕ್ ಶರ್ಮಾ</p></div>

ಅಭಿಷೇಕ್ ಶರ್ಮಾ

   

ಕೊಲಂಬೊ: ಹೊಟ್ಟೆಕೆಟ್ಟು ಈಗ ಚೇತರಿಸಿಕೊಳ್ಳುತ್ತಿರುವ ಸ್ಫೋಟಕ ಆರಂಭ ಆಟಗಾರ ಅಭಿಷೇಕ್ ಶರ್ಮಾ ಅವರು ಶುಕ್ರವಾರ ಭಾರತ ತಂಡದ ಜೊತೆ ಇಲ್ಲಿಗೆ ಬಂದಿಳಿದರು. ಪಾಕಿಸ್ತಾನ ವಿರುದ್ಧ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್  ಪಂದ್ಯದಲ್ಲಿ ಅವರು ಆಡಬಹುದೆಂಬ ವಿಶ್ವಾಸಕ್ಕೆ ಇದು ಕಾರಣವಾಗಿದೆ.

ತಂಡ ಶನಿವಾರ ಇಲ್ಲಿ ತಾಲೀಮು ನಡೆಸಲಿದ್ದು, ಇದರ ನಂತರವಷ್ಟೇ ಅವರ ಫಿಟ್ನೆಸ್‌ ಗಮನಿಸಿ ತಂಡದ ಚಿಂತಕರ ಚಾವಡಿ ನಿರ್ಧಾರ ಕೈಗೊಳ್ಳಲಿದೆ. ಹೊಟ್ಟೆನೋವಿನಿಂದ ಬಳಲಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚೇತರಿಕೆ ಪಡೆದು ತಂಡ ಸೇರಿಕೊಂಡರೂ ಅವರು ನಮೀಬಿಯಾ ವಿರುದ್ಧ ಆಡಲು ಆಗಿರಲಿಲ್ಲ.

ADVERTISEMENT

ಅಭಿಷೇಕ್ ಅವರ ತಂದೆ– ತಾಯಿ ಸಹ ಇಲ್ಲಿಗೆ ಬಂದಿಳಿದಿದ್ದಾರೆ. ರಾಜಕುಮಾರ್ ಶರ್ಮಾ ಅವರು ಅಭಿಷೇಕ್‌ಗೆ ಬಾಲ್ಯದ ಕೋಚ್ ಸಹ ಆಗಿದ್ದರು. ಏಷ್ಯಾ ಕಪ್ ಟೂರ್ನಿಯಲ್ಲೂ ಅಭಿಷೇಕ್ ಪೋಷಕರು ಪಂದ್ಯ ನೋಡಲು ದುಬೈಗೆ ಹೋಗಿದ್ದರು.

ಅಭಿಷೇಕ್ ಅಲಭ್ಯರಾದಲ್ಲಿ ಸಂಜು ಸ್ಯಾಮ್ಸನ್ ಅಥವಾ ಚೇತರಿಸಿಕೊಂಡಿರುವ ವಾಷಿಂಗ್ಟನ್ ಸುಂದರ್ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.