ADVERTISEMENT

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ತಂಡದಲ್ಲಿ ಕಮಿನ್ಸ್‌, ಹ್ಯಾಜಲ್‌ವುಡ್‌

ಪಿಟಿಐ
Published 1 ಜನವರಿ 2026, 19:46 IST
Last Updated 1 ಜನವರಿ 2026, 19:46 IST
<div class="paragraphs"><p>ಜೋಶ್‌ ಹ್ಯಾಜಲ್‌ವುಡ್‌</p></div>

ಜೋಶ್‌ ಹ್ಯಾಜಲ್‌ವುಡ್‌

   

ಮೆಲ್ಬರ್ನ್ (ಎಎಫ್‌ಪಿ): ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್‌ ಮತ್ತು ಜೋಶ್‌ ಹ್ಯಾಜಲ್‌ವುಡ್‌ ಅವರನ್ನು ಈ ವರ್ಷದ ಫೆಬ್ರುವರಿ 7 ರಿಂದ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾ ತಂಡದಲ್ಲಿ ಸೇರ್ಪಡೆ ಮಾಡಲಾಗಿದೆ.

15 ಮಂದಿಯ ಸಂಭವನೀಯ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳಿದ್ದಾರೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ವಿಶ್ವಕಪ್ ನಡೆಯಲಿದೆ.

ADVERTISEMENT

ಬೆನ್ನುನೋವಿನ ಕಾರಣ ಕಮಿನ್ಸ್‌ ಅವರಿಗೆ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಆಡಲು ಸಾಧ್ಯವಾಗಿತ್ತು. ಹ್ಯಾಜಲ್‌ವುಡ್‌ ಸರಣಿಯನ್ನೇ ಕಳೆದುಕೊಂಡಿದ್ದಾರೆ.

ಪ್ರಮುಖ ಸ್ಪಿನ್ನರ್‌ಗಳಾದ ಆ್ಯಡಂ ಜಂಪಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ ಜೊತೆ ಎಡಗೈ ಸ್ಪಿನ್ನರ್‌ಗಳಾದ ಮಾಥ್ಯೂ ಕುನ್ಹೆಮನ್ ಮತ್ತು ಕೂಪರ್ ಕಾನೊಲಿ ಅವರೂ 15 ಮಂದಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾ ತಂಡ ಫೆ. 11ರಂದು ಕೊಲಂಬೊದಲ್ಲಿ ಐರ್ಲೆಂಡ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ತಂಡ ಹೀಗಿದೆ:

ಮಿಚೆಲ್ ಮಾರ್ಷ್‌ (ನಾಯಕ), ಕ್ಸೇವಿಯರ್‌ ಬಾರ್ಟ್ಲೆಟ್‌, ಕೂಪರ್ ಕಾನೊಲಿ, ಪ್ಯಾಟ್‌ ಕಮಿನ್ಸ್‌, ಟಿಮ್‌ ಡೇವಿಡ್‌, ಕ್ಯಾಮೆರಾನ್‌ ಗ್ರೀನ್‌, ನೇಥನ್ ಎಲಿಸ್‌, ಜೋಶ್‌ ಹ್ಯಾಜಲ್‌ವುಡ್‌, ಟ್ರಾವಿಸ್‌ ಹೆಡ್‌, ಜೋಶ್‌ ಇಂಗ್ಲಿಸ್‌, ಮ್ಯಾಥ್ಯೂ ಕುನ್ಹೆಮನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮ್ಯಾಥ್ಯೂ ಶಾರ್ಟ್‌, ಮಾರ್ಕಸ್‌ ಸ್ಟೊಯಿನಿಸ್‌ ಮತ್ತು ಆ್ಯಡಂ ಜಂಪಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.