ADVERTISEMENT

ಟಿ–20 ವಿಶ್ವಕಪ್‌: ಇಂಗ್ಲೆಂಡ್‌ ತಂಡದಿಂದ ಹೊರಬಿದ್ದ ವೇಗಿ ಜೋಫ್ರಾ ಆರ್ಚರ್‌

ಮೊಣಗಂಟಿನ ಮೂಳೆ ನೋವು

ಏಜೆನ್ಸೀಸ್
Published 5 ಆಗಸ್ಟ್ 2021, 13:03 IST
Last Updated 5 ಆಗಸ್ಟ್ 2021, 13:03 IST
ಆರ್ಚರ್‌
ಆರ್ಚರ್‌   

ನಾಟಿಂಗ್‌ಹ್ಯಾಮ್‌: ಮೊಣಗಂಟಿನ ಗಾಯದಿಂದಾಗಿ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಅವರು ಟಿ–20 ವಿಶ್ವಕಪ್‌ನಲ್ಲಿ ಆಡುವ ಮತ್ತು ಆ್ಯಷಸ್‌ ಪ್ರವಾಸ ಕೈಗೊಳ್ಳುವ ಇಂಗ್ಲೆಂಡ್‌ ತಂಡದಿಂದ ಹೊರಬಿದಿದ್ದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಗುರುವಾರ ಈ ವಿಷಯ ಪ್ರಕಟಿಸಿದೆ.

ಸ್ಕ್ಯಾನಿಂಗ್‌ನಲ್ಲಿ 26 ವರ್ಷದ ಜೋಫ್ರಾ ಅವರಿಗೆ ಬಲ ಮೊಣಗಂಟಿನ ಮೂಳೆಮುರಿತವಾಗಿರುವುದು ಗೊತ್ತಾಗಿದೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

ವೈದ್ಯಕೀಯ ವರದಿಯ ಆಧಾರದಲ್ಲಿ ಅವರನ್ನು ಭಾರತ ವಿರುದ್ಧದ ಪ್ರಸಕ್ತ ಟೆಸ್ಟ್‌ ,ಐಸಿಸಿ ಟಿ–20 ವಿಶ್ವಕಪ್‌ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯುವ ಆ್ಯಷಸ್‌ ಸರಣಿ ಸೇರಿದಂತೆ ಈ ವರ್ಷದ ಎಲ್ಲ ಟೂರ್ನಿಗಳಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ತವರಿನಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಜಯಭೇರಿ ಬಾರಿಸುವಲ್ಲಿ ಆರ್ಚರ್ ಪಾತ್ರ ಗಣನೀಯವಾಗಿತ್ತು. ಬಾರ್ಬಾಡೋಸ್‌ ಸಂಜಾತ ಬೌಲರ್‌, ಟಿ–20 ವಿಶ್ವಕಪ್‌ ಮತ್ತು ಆ್ಯಷಸ್‌ ಸರಣಿಯಲ್ಲಿ ಮಹತ್ವದ ಪಾತ್ರ ವಹಿಸಬಹುದೆಂದು ಇಂಗ್ಲೆಂಡ್‌ ವಿಶ್ವಾಸ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.