ADVERTISEMENT

T20 World Cup: ಭಾರತ–ಇಂಗ್ಲೆಂಡ್ ಪಂದ್ಯಕ್ಕೆ ಗಫಾನಿ–ಪಾಲೆಕರ್ ಅಂಪೈರ್ಸ್‌

ಪಿಟಿಐ
Published 3 ಮಾರ್ಚ್ 2026, 14:09 IST
Last Updated 3 ಮಾರ್ಚ್ 2026, 14:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದುಬೈ: ನ್ಯೂಜಿಲೆಂಡ್‌ನ ಕ್ರಿಸ್‌ ಗಫಾನಿ ಮತ್ತು ದಕ್ಷಿಣ ಆಫ್ರಿಕಾದ ಅಲ್ಲಾಹುದ್ದೀನ್ ಪಾಲೆಕರ್ ಅವರು ಭಾರತ ಮತ್ತು ಇಂಗ್ಲೆಂಡ್‌ ನಡುವಣ ಗುರುವಾರ ನಡೆಯಲಿರುವ ಟಿ20 ವಿಶ್ವಕಪ್‌ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಆನ್‌ಫೀಲ್ಡ್ ಅಂಪೈರ್‌ಗಳಾಗಿದ್ದಾರೆ.

ಮುಂಬೈಯಲ್ಲಿ ನಡೆಯಲಿರುವ ಈ ಜಿಂಬಾಬ್ವೆಯ ಆ್ಯಂಡಿ ಪೈಕ್ರಾಫ್ಟ್‌ ಮ್ಯಾಚ್‌ ರೆಫ್ರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸೆಮಿಫೈನಲ್ ಪಂದ್ಯಗಳಿಗೆ ಅಂಪೈರ್ ಮತ್ತು ಮ್ಯಾಚ್‌ ರೆಫ್ರಿಗಳ ನೇಮಕವನ್ನು ಐಸಿಸಿ ಮಂಗಳವಾರ ಪ್ರಕಟಿಸಿತು.

ADVERTISEMENT

ಆಡ್ರಿಯಾನ್ ಹೋಲ್ಡ್‌ಸ್ಟಾಕ್ ಮತ್ತು ಪಾಲ್‌ ರೈಫೆಲ್ ಅವರು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಅಂಪೈರ್ ಆಗಿದ್ದಾರೆ.

ಗಫಾನಿ ಅವರು 2024ರ ಟಿ20 ಸೆಮಿಫೈನಲ್ ಪಂದ್ಯಕ್ಕೂ (ಆಗಲೂ ಭಾರತ– ಇಂಗ್ಲೆಂಡ್ ಎದುರಾಳಿಗಳಾಗಿದ್ದವು) ಅಂಪೈರ್ ಆಗಿದ್ದರು. ಪಾಲೆಕರ್ ಅವರು ಹಾಲಿ ಟೂರ್ನಿಯಲ್ಲಿ ಇಂಗ್ಲೆಂಡ್ ಆಡಿದ ಎರಡು ಪಂದ್ಯಗಳಿಗೆ ಅಂಪೈರ್ ಆಗಿದ್ದರು. ಭಾರತ– ನೆದರ್ಲೆಂಡ್ಸ್ ಪಂದ್ಯವನ್ನೂ ನಿರ್ವಹಿಸಿದ್ದರು.

ಈಡನ್‌ಗಾರ್ಡನ್‌ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುವ  ಮೊದಲ ಸೆಮಿಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ರಿಚರ್ಡ್ ಇಲಿಂಗ್‌ವರ್ತ್ ಮತ್ತು ಅಲೆಕ್ಸ್‌ ವಾರ್ಫ್ ಅವರು ಆನ್‌ಫೀಲ್ಡ್ ಅಂಪೈರ್‌ಗಳಾಗಿದ್ದಾರೆ. 

ಇಲಿಂಗ್‌ವರ್ತ್ ಅವರು ಎರಡು ವರ್ಷ ಹಿಂದೆ ನಡೆದ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ– ಅಫ್ಗಾನಿಸ್ತಾನ ನಡುವಣ ಸೆಮಿಫೈನಲ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.