ADVERTISEMENT

ಫೈನಲ್‌ನಲ್ಲಿ ಗೆದ್ದರೆ 2048ರಲ್ಲಿ ಬಾಬರ್ ಆಜಂ ಪಾಕ್‌ ಪಿಎಂ: ಗವಾಸ್ಕರ್‌ ತಮಾಷೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2022, 8:42 IST
Last Updated 12 ನವೆಂಬರ್ 2022, 8:42 IST
   

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ–20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಒಂದು ವೇಳೆ ಪಾಕಿಸ್ತಾನ ಜಯಗಳಿಸಿದರೆ, 2048ಕ್ಕೆ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಜಂ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್‌ ತಮಾಷೆ ಮಾಡಿದ್ದಾರೆ.

ಈ ಬಗ್ಗೆ ಎನ್‌ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ನಿಮಗೆ ಗೊತ್ತಾ, ವಿಶ್ವಕಪ್‌ನಲ್ಲಿ ಪಾಕಿಸ್ತಾನ ಗೆದ್ದರೆ 2048ರಲ್ಲಿ ಬಾಬರ್ ಆಜಂ ಪಾಕಿಸ್ತಾನದ ‌ಪ್ರಧಾನಿಯಾಗಲಿದ್ದಾರೆ‘ ಎಂದು ಹೇಳಿದ್ದಾರೆ.

ADVERTISEMENT

1992ರ ಏಕದಿನ ವಿಶ್ವಕಪ್‌ನಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತಂಡವು ಜಯಭೇರಿ ಮೊಳಗಿಸಿತ್ತು. ಇದಾದ 26 ವರ್ಷಗಳ ಬಳಿಕ ಅಂದರೆ 2018ರಲ್ಲಿ ಅವರು ‌ಪಾಕಿಸ್ತಾನದ ಪ‍್ರಧಾನಿಯಾಗಿ ಆಯ್ಕೆಯಾಗಿದ್ದರು. ಇದನ್ನೇ ಹೋಲಿಕೆ ಮಾಡಿ ಸುನೀಲ್‌ ಗವಾಸ್ಕರ್‌ ಹೇಳಿದ್ದಾರೆ.

ಅಂದಿನ ಪಂದ್ಯಕೂಟಕ್ಕೂ ಈಗಿನ ಪಂದ್ಯಾವಳಿಗೂ ಹಲವು ಸಾಮ್ಯತೆಗಳಿವೆ. ಅಂದು ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಪಾಕಿಸ್ತಾನ ವಿಶ್ವಕಪ್‌ ಗೆದ್ದಿತ್ತು. ಇಂದು ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಇಂಗ್ಲೆಂಡ್ ತಂಡವೇ ಎದುರಾಳಿ.

1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೆಲ್ಬರ್ನ್‌ನಲ್ಲಿ ಸೋತು ಅಭಿಯಾನ ಆರಂಭಿಸಿತ್ತು. ಈ ವಿಶ್ವಕಪಪ್‌ನಲ್ಲೂ ಅದು ಪುನರಾವರ್ತನೆಯಾಗಿದೆ. ಈ ವಿಶ್ವಕಪ್‌ನಂತೆ ಅಂದೂ ಭಾರತದ ವಿರುದ್ಧ ಪಾಕಿಸ್ತಾನ ಸೋತಿತ್ತು.

ಅಂದೂ ಈ ಬಾರಿಯಂತೆ ಪ್ರಯಾಸದಿಂದ ಸೆಮಿಫೈನಲ್‌ಗೆ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.