ADVERTISEMENT

ಭಾರತ– ವೆಸ್ಟ್ ಇಂಡೀಸ್ ಸರಣಿ ಮೇಲೆ ಕೋವಿಡ್‌ ಕಾರ್ಮೋಡ: ಭಾರತದ 4 ಆಟಗಾರರಿಗೆ ಸೋಂಕು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2022, 2:00 IST
Last Updated 3 ಫೆಬ್ರುವರಿ 2022, 2:00 IST
ಭಾರತ ಕ್ರಿಕೆಟ್‌ ತಂಡ
ಭಾರತ ಕ್ರಿಕೆಟ್‌ ತಂಡ   

ನವದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಗೆ ಕೆಲ ದಿನಗಳು ಬಾಕಿ ಇರುವಾಗಲೇ ಭಾರತ ತಂಡದ ನಾಲ್ವರು ಆಟಗಾರರಿಗೆ ಕೋವಿಡ್‌ ದೃಢಪಟ್ಟಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ, ‘ಭಾರತದ ಬ್ಯಾಟರ್‌ಗಳಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಋತುರಾಜ್ ಗಾಯಕವಾಡ್ ಹಾಗೂ ಬೌಲರ್‌ ನವದೀಪ್‌ ಸೈನಿಗೆ ಕೋವಿಡ್‌ ದೃಢಪಟ್ಟಿದೆ’ ಎಂದು ತಿಳಿಸಿದೆ.

ಕೊರೊನಾ ಸೋಂಕು ಹೊಂದಿರುವ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.

ADVERTISEMENT

ಫೆ.6ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಬಳಿಕ ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಮೂರು ಪಂದ್ಯಗಳ ಟಿ–20 ಸರಣಿ ನಡೆಯಲಿದೆ.

ಫೆ. 6, 9 ಮತ್ತು 11 ರಂದು ಏಕದಿನ ಸರಣಿ ನಡೆಯಲಿದೆ. ಫೆ. 16, 18 ಮತ್ತು 20 ರಂದು ಟಿ–20 ಸರಣಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.