ADVERTISEMENT

ಟೆಸ್ಟ್‌ ಸರಣಿ: ಇಂಗ್ಲೆಂಡ್‌ಗೆ ಬಂದಿಳಿದ ಭಾರತ ತಂಡ

ಜೂನ್ 20ರಿಂದ ಟೆಸ್ಟ್‌ ಸರಣಿ

ಪಿಟಿಐ
Published 7 ಜೂನ್ 2025, 16:13 IST
Last Updated 7 ಜೂನ್ 2025, 16:13 IST
ಭಾರತ ತಂಡದ ನಾಯಕ ಶುಭಮನ್‌ ಗಿಲ್‌ –ಬಿಸಿಸಿಐ ಎಕ್ಸ್‌ ಚಿತ್ರ
ಭಾರತ ತಂಡದ ನಾಯಕ ಶುಭಮನ್‌ ಗಿಲ್‌ –ಬಿಸಿಸಿಐ ಎಕ್ಸ್‌ ಚಿತ್ರ   

ಲಂಡನ್‌: ಈ ತಿಂಗಳ 20ರಿಂದ ಇಂಗ್ಲೆಂಡ್ ವಿರುದ್ಧ ಆರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಶನಿವಾರ ಇಂಗ್ಲೆಂಡ್‌ಗೆ ಬಂದಿಳಿಯಿತು.

ಈ ಸರಣಿಯು 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಋತುವಿನ ಭಾಗವಾಗಿದೆ. ಭಾರತ ತಂಡದ ಆಟಗಾರರು ಶುಕ್ರವಾರ ರಾತ್ರಿ ಮುಂಬೈನಿಂದ ಪ್ರಯಾಣ ಬೆಳೆಸಿದ್ದರು. 

ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ತಂಡಕ್ಕೆ ಶುಭಮನ್‌ ಗಿಲ್‌ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ಯುವ ಆಟಗಾರರನ್ನು ಒಳಗೊಂಡ ತಂಡವನ್ನು ಅವರು ಮುನ್ನಡೆಸಲಿದ್ದಾರೆ. ವಿಕೆಟ್‌ಕೀಪರ್ ರಿಷಭ್ ಪಂತ್ ತಂಡಕ್ಕೆ ಉಪನಾಯಕರಾಗಿದ್ದಾರೆ.

ADVERTISEMENT

ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ‘ಟೆಸ್ಟ್’ ಸರಣಿಗಾಗಿ ಭಾರತ ‘ಎ’ ತಂಡದಲ್ಲಿ ಆಡಲು ಆರು ಆಟಗಾರರು ಈ ಮೊದಲೇ ಇಂಗ್ಲೆಂಡ್ ತೆರಳಿದ್ದಾರೆ. 

ಮೊದಲ ಟೆಸ್ಟ್ ಪಂದ್ಯ ಜೂನ್ 20ರಿಂದ ಲೀಡ್ಸ್‌ನಲ್ಲಿ ನಡೆಯಲಿದೆ. ನಂತರದ ಪಂದ್ಯಗಳು ಕ್ರಮವಾಗಿ ಬರ್ಮಿಂಗ್‌ಹ್ಯಾಮ್‌ (ಜುಲೈ 2–6), ಲಾರ್ಡ್ಸ್ (ಜುಲೈ 10–14), ಮ್ಯಾಂಚೆಸ್ಟರ್ (ಜುಲೈ 23–27) ಮತ್ತು ಓವಲ್‌ನಲ್ಲಿ (ಆಗಸ್ಟ್ 4–8) ನಡೆಯಲಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.