
ಪ್ರಜಾವಾಣಿ ವಾರ್ತೆ
ಬೆಂಗಳೂರು: ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅಭಿಮಾನಿಗಳು ಅತಿ ಹೆಚ್ಚು ಹುಡುಕಾಟ ನಡೆಸಿದ ವಿಶ್ವದ ಐವರು ಆಟಗಾರರಲ್ಲಿ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿದ್ದಾರೆ.
2023ರಲ್ಲಿ ಇಲ್ಲಿಯವರೆಗೆ ಕೊಹ್ಲಿ ಕುರಿತ ಮಾಹಿತಿಗಳಿಗಾಗಿ ಗೂಗಲ್ ಮೂಲಕ 6.8 ಕೋಟಿ ಜನರು ಹುಡುಕಾಟ ನಡೆಸಿದ್ದಾರೆ. ಮೊದಲ ಸ್ಥಾನದಲ್ಲಿ ಪೋರ್ಚುಗಲ್ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (19.94 ಕೋಟಿ) ಅವರಿದ್ದಾರೆ.
ಬ್ರೆಜಿಲ್ ಫುಟ್‌ಬಾಲ್ ತಾರೆ ನೇಮರ್ (14.09 ಕೋಟಿ), ಅರ್ಜೆಂಟಿನಾದ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ (10.44 ಕೋಟಿ) ಹಾಗೂ ಬ್ಯಾಸ್ಕೆಟ್‌ಬಾಲ್ ಆಟಗಾರ ಲಿಬ್ರಾನ್ ಜೇಮ್ಸ್ (7.21 ಕೋಟಿ) ಅವರು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದಾರೆಂದು ‘ಲೈವ್ ಮಿಂಟ್’ ವೆಬ್‌ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.