ADVERTISEMENT

ಕುಡಿಮೀಸೆ ಹುಡುಗರ ವರಸೆ

ಗಿರೀಶದೊಡ್ಡಮನಿ
Published 28 ಏಪ್ರಿಲ್ 2019, 19:45 IST
Last Updated 28 ಏಪ್ರಿಲ್ 2019, 19:45 IST
ರಿಯಾನ್ ಪರಾಗ್
ರಿಯಾನ್ ಪರಾಗ್   

ಹೋದ ಗುರುವಾರ ರಾತ್ರಿ ರಿಯಾನ್ ಪರಾಗ್ ‘ಹಿಟ್‌ವಿಕೆಟ್‌’ ಆಗದೇ ಹೋಗಿದ್ದರೆ ಅರ್ಧಶತಕ ಗಳಿಸುವ ಅವಕಾಶ ಇತ್ತು. ಆದರೆ ರಿಯಾನ್ ಅಮೋಘ ಆಟವು ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆ ಜಯದ ಕಾಣಿಕೆ ನೀಡಿತ್ತು.

ತಂಡದ ಅನುಭವಿ ಆಟಗಾರರು ಕೋಲ್ಕತ್ತ ನೈಟ್‌ ರೈಡರ್ಸ್‌ ಬೌಲರ್‌ಗಳ ಎದುರು ನೆಲಕಚ್ಚಿದರು. ಆದರೆ, ಐಪಿಎಲ್‌ನಲ್ಲಿ ಮೂರು ಪಂದ್ಯಗಳನ್ನಷ್ಟೇ ಆಡಿರುವ ರಿಯಾನ್ ದಿಟ್ಟತನದಿಂದ ಆಡಿದರು. ಅಲ್ಲದೇ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದರು. ಗುವಾಹಟಿಯ ರಿಯಾನ್‌ಗೆ ಅಪ್ಪ ಪರಾಗ್ ದಾಸ್ ಅವರೇ ಮೊದಲ ಕ್ರಿಕೆಟ್ ಗುರು. ಪರಾಗ್ ಅವರು ಅಸ್ಸಾಂ ತಂಡಕ್ಕೆ ಆಡಿದ್ದರು.

2017ರಲ್ಲಿ ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ ರಿಯಾನ್‌, ಎಸಿಸಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಆಡಿದ್ದರು. ಅಲ್ಲಿ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅವರ ಪ್ರತಿಭೆ ಮತ್ತಷ್ಟು ಬೆಳಗಿತು. ಈ ವರ್ಷ ಐಪಿಎಲ್‌ಗೂ ಪದಾರ್ಪಣೆ ಮಾಡಿ ಗಮನ ಸೆಳೆಯುತ್ತಿದ್ದಾರೆ.

ADVERTISEMENT

18 ದಾಟದ ಹಲವು ಆಟಗಾರರಿಗೆ ಐಪಿಎಲ್ ಮೊದಲಿನಿಂದಲೂ ವೇದಿಕೆಯಾಗಿದೆ. ಈ ಬಾರಿಯೂ ರಿಯಾನ್ ಸೇರಿದಂತೆ ಕೆಲವು ಟೀನೇಜ್ ಆಟಗಾರರು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಂದೀಪ್ ಲಮಿಚಾನೆ, ಕಾಶ್ಮೀರದಿಂದ ಬಂದಿರುವ ಪ್ರತಿಭೆ, ಮುಂಬೈ ಇಂಡಿಯನ್ಸ್‌ ತಂಡದಲ್ಲಿರುವ ರಸೀಕ್ ಸಲಾಂ ಮತ್ತು ಬಂಗಾಳದ ಆಟಗಾರ, ಆರ್‌ಸಿಬಿಯಲ್ಲಿರುವ ಪ್ರಯಾಸ್ ರೇ ಬರ್ಮನ್ ಅವರೇ ಆ ಹುಡುಗರು.

ಪ್ರಯಾಸ್ ಅವರು ಉತ್ತಮ ಮೌಲ್ಯ ಪಡೆದು ಆರ್‌ಸಿಬಿ ಸೇರಿದ್ದಾರೆ. ಆದರೆ ಆರ್‌ಸಿಬಿ ಈ ಬಾರಿ ಪ್ಲೇ ಆಫ್‌ ಪ್ರವೇಶಿಸುವುದು ಅನುಮಾನ. ಆದ್ದರಿಂದ ಮುಂದಿನ ಮೂರು ಪಂದ್ಯಗಳಲ್ಲಿ ಬೆಂಚ್‌ನಲ್ಲಿರುವ ಪ್ರಯಾಸ್ ಮತ್ತು ಯುವ ಆಟಗಾರರಿಗೆ ಅವಕಾಶ ಕೊಡುವ ನಿರೀಕ್ಷೆ ಇದೆ. ಈ ಅವಕಾಶಗಳನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ನೋಡಬೇಕಷ್ಟೇ.

ಈ ಬಾರಿಯ ಸಾಧನೆಗಳು

* ರಿಯಾನ್ ಪರಾಗ್ (17)

ಸ್ಥಳ: ಗುವಾಹಟಿ, ಅಸ್ಸಾಂ

ಶೈಲಿ: ಬಲಗೈ ಬ್ಯಾಟ್ಸ್‌ಮನ್, ಲೆಗ್‌ಸ್ಪಿನ್ನರ್.

ಪಂದ್ಯ: 04

ಗಳಿಸಿದ ರನ್: 110

ವಿಕೆಟ್: 01

ಮೌಲ್ಯ: ₹ 20ಲಕ್ಷ

ಸಂದೀಪ್ ಲಮಿಚಾನೆ

* ಸಂದೀಪ್ ಲಮಿಚಾನೆ (18)

ಸ್ಥಳ: ಸಿಯಾಂಗ್ಜಾ, ನೇಪಾಳ

ತಂಡ: ಡೆಲ್ಲಿ ಕ್ಯಾಪಿಟಲ್ಸ್‌

ಶೈಲಿ: ಲೆಗ್‌ಸ್ಪಿನ್ನರ್

ಪಂದ್ಯ: 05

ವಿಕೆಟ್: 8

ಬಿಟ್ಟುಕೊಟ್ಟ ರನ್: 174

ಮೌಲ್ಯ: ₹ 20 ಲಕ್ಷ

* ರಸಿಕ್ ಸಲಾಂ (18)

ಸ್ಥಳ: ಜಮ್ಮು–ಕಾಶ್ಮೀರ

ಶೈಲಿ: ಬಲಗೈ ಆಲ್‌ರೌಂಡರ್

ತಂಡ: ಮುಂಬೈ ಇಂಡಿಯನ್ಸ್

ಪಂದ್ಯ: 01

ರನ್: 05

ಮೌಲ್ಯ: ₹ 20 ಲಕ್ಷ

ಪ್ರಯಾಸ್ ರೇ ಬರ್ಮನ್

* ಪ್ರಯಾಸ್ ರೇ ಬರ್ಮನ್ (16)

ಸ್ಥಳ: ಬಂಗಾಳ

ತಂಡ: ಆರ್‌ಸಿಬಿ

ಶೈಲಿ: ಲೆಗ್‌ಸ್ಪಿನ್ನರ್

ಪಂದ್ಯ: 01

ರನ್: 19

ಮೌಲ್ಯ: ₹ 1.5 ಕೋಟಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.