ADVERTISEMENT

ಬ್ಯಾಟ್ಸ್‌ಮನ್‌ಗಳಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿ: ಸಚಿನ್‌

ಪಿಟಿಐ
Published 3 ನವೆಂಬರ್ 2020, 15:42 IST
Last Updated 3 ನವೆಂಬರ್ 2020, 15:42 IST
ಸಚಿನ್‌ ತೆಂಡೂಲ್ಕರ್‌–ರಾಯಿಟರ್ಸ್ ಚಿತ್ರ
ಸಚಿನ್‌ ತೆಂಡೂಲ್ಕರ್‌–ರಾಯಿಟರ್ಸ್ ಚಿತ್ರ   

ನವದೆಹಲಿ: ಜೀವರಕ್ಷಣೆಯ ಉದ್ದೇಶದಿಂದ ಬ್ಯಾಟ್ಸ್‌ಮನ್‌ಗಳಿಗೆ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ಒತ್ತಾಯಿಸಿದ್ದಾರೆ.

ಐಪಿಎಲ್‌ ಟೂರ್ನಿಯಲ್ಲಿ ಇತ್ತೀಚೆಗೆ ಕಿಂಗ್ಸ್ ಇಲೆವನ್‌ ಪಂಜಾಬ್‌ ವಿರುದ್ಧದ ಪಂದ್ಯದ ವೇಳೆ ಸನ್‌ರೈಸರ್ಸ್‌ ಹೈದರಾಬಾದ್‌ನ ವಿಜಯ್‌ ಶಂಕರ್‌ ತಲೆಗೆ ಚೆಂಡು ಜೋರಾಗಿ ಬಡಿದಿತ್ತು. ಅವರನ್ನು ರನೌಟ್‌ ಮಾಡುವ ಯತ್ನದಲ್ಲಿ ನಿಕೋಲಸ್‌ ಪೂರನ್‌ ಎಸೆದ ಚೆಂಡು ತಲೆಗೆ ತಾಗಿತ್ತು. ಅದೃಷ್ಟವಶಾತ್‌ ವಿಜಯ್‌ ಹೆಲ್ಮೆಟ್‌ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದರು. ಈ ವಿಡಿಯೋವನ್ನು ತೆಂಡೂಲ್ಕರ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಕ್ರಿಕೆಟ್‌ ವೇಗವಾಗಿ ಬೆಳೆಯುತ್ತಿದೆ. ಆದರೆ ಜೀವದ ಸುರಕ್ಷತೆ? ಇತ್ತೀಚೆಗೆ ನಾವು ಆಘಾತಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದೇವೆ. ಎದುರಾಳಿ ಬೌಲರ್‌ ಸ್ಪಿನ್ನರ್‌ ಅಥವಾ ವೇಗಿ ಆಗಿರಲಿ, ಬ್ಯಾಟ್ಸ್‌ಮನ್‌ಗಳು ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯ ಮಾಡಬೇಕು. ಐಸಿಸಿ ಇದನ್ನು ಆದ್ಯತೆಯಾಗಿ ಪರಿಗಣಿಸಬೇಕು‘ ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

2014ರ ನವೆಂಬರ್‌ನಲ್ಲಿ ನಡೆದ ದೇಶಿ ಪಂದ್ಯವೊಂದರಲ್ಲಿ ಸೀನ್ ಅಬಾಟ್ ಎಸೆದ ಬೌನ್ಸರ್‌ವೊಂದು ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ಅವರ ಜೀವವನ್ನೇ ಬಲಿ ತೆಗದುಕೊಂಡಿತ್ತು. ಘಟನೆಯ ಬಳಿಕ ಆಟಗಾರರ ಸುರಕ್ಷತೆಯ ಕುರಿತು ಚರ್ಚೆಗಳು ನಡೆದಿದ್ದವು.

ತೆಂಡೂಲ್ಕರ್‌ ಅವರು ಬಿಸಿಸಿಐ, ಕ್ರಿಕೆಟ್‌ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್‌ ಮಂಡಳಿಗಳನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್‌ ಮಾಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.