ADVERTISEMENT

Test Cricket: 35 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಗೆದ್ದ ವಿಂಡೀಸ್; ಸರಣಿ ಸಮಬಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2025, 8:08 IST
Last Updated 27 ಜನವರಿ 2025, 8:08 IST
<div class="paragraphs"><p>ಜಯದ ಸಂಭ್ರಮದಲ್ಲಿ ವೆಸ್ಟ್‌ ಇಂಡೀಸ್‌ ಆಟಗಾರರು</p></div>

ಜಯದ ಸಂಭ್ರಮದಲ್ಲಿ ವೆಸ್ಟ್‌ ಇಂಡೀಸ್‌ ಆಟಗಾರರು

   

ಕೃಪೆ:X / @windiescricket

ಮುಲ್ತಾನ್‌: ಸ್ಪಿನ್ನರ್ ಜೊಮೆಲ್ ವಾರಿಕನ್ (27ಕ್ಕೆ5) ಅವರ ಐದು ವಿಕೆಟ್‌ ಗೊಂಚಲಿನ ನೆರವಿನಿಂದ ವೆಸ್ಟ್‌ ಇಂಡೀಸ್ ಎರಡನೇ ಕ್ರಿಕೆಟ್ ಟೆಸ್ಟ್‌ ಪಂದ್ಯದಲ್ಲಿ ಸೋಮವಾರ ಪಾಕಿಸ್ತಾನ ತಂಡವನ್ನು 120 ರನ್‌ಗಳಿಂದ ಸೋಲಿಸಿತು. ಇದರಿಂದ ಎರಡು ಟೆಸ್ಟ್‌ಗಳ ಸರಣಿ 1–1 ಸಮಬಲಗೊಂಡಿತು.

ADVERTISEMENT

ವಾರಿಕನ್ ಈ ಪಂದ್ಯದಲ್ಲಿ 9 ವಿಕೆಟ್‌ಗಳನ್ನು, ಸರಣಿಯಲ್ಲಿ 19 ವಿಕೆಟ್‌ಗಳನ್ನು ಕಬಳಿಸಿದರು. ಅವರು  ಅರ್ಹವಾಗಿ ಪಂದ್ಯದ ಪುರುಷೋತ್ತಮ ಮತ್ತು ಸರಣಿಯ ಸರ್ವೋತ್ತಮ ಗೌರವಗಳನ್ನು ಪಡೆದರು.

ಗೆಲುವಿಗೆ 254 ರನ್‌ಗಳ ಬೆನ್ನಟ್ಟಿದ್ದ ಪಾಕಿಸ್ತಾನ ದ್ವಿತೀಯ ಇನಿಂಗ್ಸ್‌ನಲ್ಲಿ 133 ರನ್‌ಗಳಿಗೆ ಆಲೌಟ್‌ ಆಯಿತು. ಇದು ಪಾಕ್‌ ನೆಲದಲ್ಲಿ ವೆಸ್ಟ್‌ ಇಂಡೀಸ್‌ಗೆ ಸುಮಾರು 35 ವರ್ಷಗಳಲ್ಲಿ ಒಲಿದ ಮೊದಲ ಜಯ. 1990ರ ನವೆಂಬರ್‌ನಲ್ಲಿ ಫೈಸಲಾಬಾದ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್ ಕೊನೆಯ ಬಾರಿ ಜಯಗಳಿಸಿತ್ತು. ನಂತರ ಎರಡು ಸರಣಿಗಳಲ್ಲಿ (1997, 2006) ಒಂದೂ ಪಂದ್ಯ ಗೆದ್ದಿರಲಿಲ್ಲ.

ಇದೇ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಪಾಕಿಸ್ತಾನ ಗೆದ್ದುಕೊಂಡಿತ್ತು.

ಪಂದ್ಯ ಹಾಗೂ ಸರಣಿ ಶ್ರೇಷ್ಠ
ಜೊಮೆಲ್‌ ವರ್ರಿಕನ್‌ ಅವರು ಟೂರ್ನಿಯ ಎರಡೂ ಪಂದ್ಯಗಳಲ್ಲಿ ಮಿಂಚಿದರು.

ಮೊದಲ ಪಂದ್ಯದಲ್ಲಿ 10 ವಿಕೆಟ್‌ ಪಡೆದಿದ್ದ ಅವರು, ಎರಡನೇಯದ್ದರಲ್ಲಿ 70 ರನ್‌ ನೀಡಿ 9 ವಿಕೆಟ್‌ಗಳನ್ನು ಉರುಳಿಸಿದರು. ಹೀಗಾಗಿ, ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.

ಸ್ಕೋರುಗಳು:

ವೆಸ್ಟ್‌ ಇಂಡೀಸ್‌: 163 ಮತ್ತು 244;

ಪಾಕಿಸ್ತಾನ: 154 ಮತ್ತು 41.1 ಓವರುಗಳಲ್ಲಿ 133

(ಬಾಬರ್ ಆಜಂ 31, ಮೊಹಮ್ಮದ್ ರಿಜ್ವಾನ್ 25; ಗುಡಕೇಶ್ ಮೋತಿ 35ಕ್ಕೆ2, ಕೆವಿನ್ ಸಿಂಕ್ಲೇರ್ 61ಕ್ಕೆ3, ಜೋಮೆಲ್ ವಾರಿಕನ್ 27ಕ್ಕೆ5).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.