ADVERTISEMENT

ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಮ್ಮ ಕುಟುಂಬವಿದ್ದಂತೆ: ಡ್ವೆನ್ ಬ್ರಾವೊ

ಪಿಟಿಐ
Published 21 ಏಪ್ರಿಲ್ 2020, 12:40 IST
Last Updated 21 ಏಪ್ರಿಲ್ 2020, 12:40 IST
ಡ್ವೇನ್ ಬ್ರಾವೊ
ಡ್ವೇನ್ ಬ್ರಾವೊ   

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಕೌಟುಂಬಿಕ ವಾತಾವರಣವಿದೆ. ನಮ್ಮ ಮನೆಯಲ್ಲಿದ್ದಂತೆ ಭಾವನೆ ಮೂಡುತ್ತದೆ ಎಂದು ವೆಸ್ಟ್ ಇಂಡೀಸ್‌ ಆಲ್‌ರೌಂಡರ್ ಡ್ವೆನ್ ಬ್ರಾವೊ ಹೇಳಿದ್ದಾರೆ.

‘ಐಪಿಎಲ್‌ನಲ್ಲಿಯೇ ಸಿಎಸ್‌ಕೆ ತಂಡವು ಅತ್ಯಂತ ವಿಶಿಷ್ಟವಾದದ್ದು ತಂಡದಲ್ಲಿರುಷ್ಟು ಸಮಯವೂ ಕುಟುಂಬದ ಸದಸ್ಯರ ರೀತಿಯಲ್ಲಿ ಎಲ್ಲರೂ ಇರುತ್ತಾರೆ. ತಂಡಕ್ಕೆ ಬರುವ ಹೊಸಬರು ಸೇರಿದಂತೆ ಎಲ್ಲರಿಗೂ ಇದೇ ಭಾವನೆ ಇದೆ’ ಎಂದು ಚೆನ್ನೈ ಫ್ರ್ಯಾಂಚೈಸ್‌ ವೆಬ್‌ಸೈಟ್‌ಗೆ ಹೇಳಿದ್ದಾರೆ.

‘ನಾವೆಲ್ಲರೂ ಪರಸ್ಪರರ ಸಾಧನೆಗಳನ್ನು ಸಂಭ್ರಮಿಸುತ್ತೇವೆ. ಯಾರೇ ಯಶಸ್ಸು ಸಾಧಿಸಿದರೂ ಎಲ್ಲರೂ ಅದಕ್ಕಾಗಿ ಖುಷಿಪಡುತ್ತೇವೆ. ಸಂತಸ ಹಂಚಿಕೊಳ್ಳುತ್ತೇವೆ. ನಮ್ಮೆಲ್ಲರಿಗೂ ಮುಖ್ಯವಾಗಿ ತಂಡವು ಗೆಲ್ಲಬೇಕು ಎನ್ನುವುದೊಂದೇ ಗುರಿ. ವೈಯಕ್ತಿಕ ಸಾಧನೆಯು ಆ ಗುರಿಯನ್ನು ಸಾಧಿಸಲು ನೆರವಾಗಬೇಕು ಎಂಬ ಛಲ ಇರುತ್ತದೆ’ ಎಂದು ವರ್ಣಿಸಿದ್ದಾರೆ.

ADVERTISEMENT

‘ತಂಡದ ನಾಯಕ, ಮಾಲೀಕರು ಮತ್ತು ವ್ಯವಸ್ಥಾಪಕ ಮಂಡಳಿಯ ಸಂಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ಇದ್ದರೆ ಮಾತ್ರ ಇಂತಹ ವಾತಾವರಣ ಸಾಧ್ಯ. ಇದು ಕ್ರಿಕೆಟ್. ಇದರಲ್ಲಿ ಪ್ರತಿ ಸಾರಿಯೂ ಒಬ್ಬನೇ ಆಟಗಾರ ನಿರಂತರವಾಗಿ ಚೆನ್ನಾಗಿ ಆಡಲು ಸಾದ್ಯವಿಲ್ಲ. ಇದು ತಂಡ ಕ್ರೀಡೆ. ಎಲ್ಲರ ಪಾಲುದಾರಿಕೆಯೂ ಮುಖ್ಯ ಎಂಬುದನ್ನು ಅವರು ಅರಿತಿರುವುದರಿಂದ ಇದು ಸಾಧ್ಯವಾಗಿದೆ’ ಎಂದು ಬ್ರಾವೊ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.