ADVERTISEMENT

ಬಯೊಬಬಲ್‌ನಲ್ಲಿ ಸೋಂಕು ಸಾಧ್ಯತೆ ಇಲ್ಲ: ಆರ್‌ಸಿಬಿ ತಂಡ ತೊರೆದ ಜಂಪಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 21:53 IST
Last Updated 30 ಏಪ್ರಿಲ್ 2021, 21:53 IST
ಆ್ಯಡಂ ಜಂಪಾ –ಪಿಟಿಐ ಚಿತ್ರ
ಆ್ಯಡಂ ಜಂಪಾ –ಪಿಟಿಐ ಚಿತ್ರ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಬಯೊಬಬಲ್ ವ್ಯವಸ್ಥೆ ಅತ್ಯಂತ ಸುರಕ್ಷಿತವಾಗಿದ್ದು ಯಾವುದೇ ಕಾರಣಕ್ಕೂ ಅಲ್ಲಿ ಸೋಂಕು ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಅವರು ತಂಡದ ಕೇನ್ ರಿಚರ್ಡ್ಸನ್ ಜೊತೆ ನಾಲ್ಕು ದಿನಗಳ ಹಿಂದೆ ಬಯೊಬಬಲ್ ತೊರೆದು ತವರಿಗೆ ಮರಳಿದ್ದರು. ದೋಹಾ ಮೂಲಕ ಆಸ್ಟ್ರೇಲಿಯಾ ತಲುಪಿದ ನಂತರ ಕಳುಹಿಸಿರುವ ಸಂದೇಶವನ್ನು ಫ್ರಾಂಚೈಸ್ ಗುರುವಾರ ಬಿಡುಗಡೆ ಮಾಡಿದೆ.‌

‘ಆಟಗಾರರ ಸುರಕ್ಷತೆಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನೇಕ ಸೌಕರ್ಯಗಳನ್ನು ಮಾಡಿದೆ. ಹೀಗಾಗಿ ಟೂರ್ನಿಗೆ ಯಾವ ಧಕ್ಕೆಯೂ ಇಲ್ಲ. ಅದು ಸುಸೂತ್ರವಾಗಿ ಪೂರ್ಣಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.