ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಸಂಜಯ್ ಶತಕ; ಇನಿಂಗ್ಸ್ ಮುನ್ನಡೆಯತ್ತ ಕೋಲ್ಟ್ಸ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 19:05 IST
Last Updated 10 ಸೆಪ್ಟೆಂಬರ್ 2025, 19:05 IST
<div class="paragraphs"><p>ಕೆಎಸ್‌ಸಿಎ ಕೋಲ್ಟ್ಸ್‌ ಪರ ಶತಕ ಸಿಡಿಸಿದ&nbsp;ಸಂಜಯ್ ಅಶ್ವಿನ್ (115) ಬ್ಯಾಟಿಂಗ್ ವೈಖರಿ. </p></div>

ಕೆಎಸ್‌ಸಿಎ ಕೋಲ್ಟ್ಸ್‌ ಪರ ಶತಕ ಸಿಡಿಸಿದ ಸಂಜಯ್ ಅಶ್ವಿನ್ (115) ಬ್ಯಾಟಿಂಗ್ ವೈಖರಿ.

   

ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು/ಬೆಂಗಳೂರು: ವಿಕೆಟ್‌ಕೀಪರ್‌ ಸಂಜಯ್‌ ಅಶ್ವಿನ್ ಸೊಗಸಾದ ಶತಕದಿಂದ ( 115; 200 ಎ, 4X14, 6X1) ಕೆಎಸ್‌ಸಿಎ ಕೋಲ್ಟ್ಸ್‌ ತಂಡವು ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 450 ರನ್‌ಗಳ ಉತ್ತಮ ಮೊತ್ತ ಪೇರಿಸಿದ್ದು, ಎರಡನೇ ದಿನದಂತ್ಯಕ್ಕೆ ಆಂಧ್ರ ತಂಡವು ಸಂಕಷ್ಟದಲ್ಲಿದೆ.

ADVERTISEMENT

ಇಲ್ಲಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ಯಾ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬುಧವಾರ ಬ್ಯಾಟಿಂಗ್‌ ಮುಂದುವರಿಸಿದ ಕೋಲ್ಟ್ಸ್‌ ಪರ ಅಶ್ವಿನ್‌ ಉತ್ತಮ ಇನಿಂಗ್ಸ್ ಕಟ್ಟಿದರು. ಅವರಿಗೆ ಆಲ್‌ರೌಂಡರ್ ಮೊಹ್ಸಿನ್ ಖಾನ್‌ ಅರ್ಧಶತಕದ ಮೂಲಕ (56) ಸಾಥ್ ನೀಡಿದರು.

ಪ್ರತ್ಯುತ್ತರವಾಗಿ ಆಂಧ್ರ ಕ್ರಿಕೆಟ್ ಸಂಸ್ಥೆ 6 ವಿಕೆಟ್‌ಗೆ 168 ರನ್‌ ಗಳಿಸಿದ್ದು, ಹಿನ್ನಡೆ ತಪ್ಪಿಸಿಕೊಳ್ಳಲು ಇನ್ನೂ 282 ರನ್ ಬೇಕಿದೆ. ತಂಡದ ಪರ ಅಶ್ವಿನ್ ಹೆಬ್ಬಾರ್ (80) ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಮೊನಿಷ್‌ ರೆಡ್ಡಿ ಹಾಗೂ ಕೆ.ಪಿ. ಕಾರ್ತಿಕೇಯ ತಲಾ ಎರಡು ವಿಕೆಟ್‌ ಉರುಳಿಸಿ ಎದುರಾಳಿಗಳನ್ನು ನಿಯಂತ್ರಿಸಿದರು.

ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಎರಡನೇ ದಿನದಂತ್ಯಕ್ಕೆ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆಯು ಬರೋಡ ಕ್ರಿಕೆಟ್‌ ಸಂಸ್ಥೆ ಎದುರು ಬೃಹತ್‌ ಮೊತ್ತದತ್ತ ದಾಪುಗಾಲು ಹಾಕಿದೆ.

ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ: ಕೆಎಸ್‌ಸಿಎ ಕೋಲ್ಟ್ಸ್‌: 106.5 ಓವರ್‌ಗಳಲ್ಲಿ 450 ( ಸಂಜಯ್‌ ಅಶ್ವಿನ್‌ 115, ಮೊಹ್ಸಿನ್‌ ಖಾನ್‌ 56. ಕೆ. ಸಾಯಿತೇಜ 104ಕ್ಕೆ 3). ಆಂಧ್ರ ಕ್ರಿಕೆಟ್ ಸಂಸ್ಥೆ: 53 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ( ಅಶ್ವಿನ್ ಹೆಬ್ಬಾರ್ 80, ಸಿ.ಆರ್. ಜ್ಞಾನೇಶ್ವರ್‌ 28. ಕೆ.ಪಿ. ಕಾರ್ತಿಕೇಯ 3ಕ್ಕೆ 2, ಮೊನಿಷ್ ರೆಡ್ಡಿ 28ಕ್ಕೆ 2).

ಎಸ್‌ಡಿಎನ್ಆರ್‌ಡಬ್ಲ್ಯು ಕ್ರೀಡಾಂಗಣ, ಮೈಸೂರು: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 149 ಓವರ್‌ಗಳಲ್ಲಿ 6 ವಿಕೆಟ್‌ಗೆ 447 ( ಕೆ. ಅಂಕಿತ್‌ 187, ಏಕಾಂತ್ ಸೇನ್‌ 72. ಪಿ. ಮಹೇಶ್‌ 110ಕ್ಕೆ 3)

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ: 162 ಮತ್ತು 46 ಓವರ್‌ಗಳಲ್ಲಿ 4ಕ್ಕೆ150 (ಹರ್ಷ ಗೌಳಿ 40, ಯಶ್ ದುಬೆ 46, ಹರ್ಷಿತ್ ಯಾದವ್ ಔಟಾಗದೇ 34, ರಿಷಭ್ ಚೌಹಾಣ್ 26, ವಿದ್ಯಾಧರ್ ಪಾಟೀಲ 24ಕ್ಕೆ2, ಯಶೋವರ್ಧನ್ ಪರಂತಾಪ್ 12ಕ್ಕೆ2) ಕೆಎಸ್‌ಸಿಎ ಇಲೆವನ್:  44.3 ಓವರ್‌ಗಳಲ್ಲಿ 138 (ರೋಹನ್ ಪಾಟೀಲ 28, ಕೆ.ಎಲ್. ಶ್ರೀಜಿತ್ 34, ಅಧೀರ್ ಪ್ರತಾಪ್ ಸಿಂಗ್ 48ಕ್ಕೆ4, ಆರ್ಯನ್ ಪಾಂಡೆ 21ಕ್ಕೆ2) 

 ಬಿಜಿಎಸ್ ಮೈದಾನ: ವಿದರ್ಭ: ಮೊದಲ ಇನಿಂಗ್ಸ್: 110.5 ಓವರ್‌ಗಳಲ್ಲಿ 383 (ಅಥರ್ವ ತೈಡೆ 170, ಅಮನ್ ಮೊಖಾಡೆ 60, ಶಿವಂ ದೇಶಮುಖ 85, ಯಶ್ ಕದಂ 33, ಆದಿತ್ಯ ನಾಯರ್ 65ಕ್ಕೆ2, ಅಧೋಕ್ಷ ಹೆಗಡೆ 96ಕ್ಕೆ4, ಶ್ರೀಶಾ ಆಚಾರ್ 96ಕ್ಕೆ3) ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 57 ಓವರ್‌ಗಳಲ್ಲಿ 7ಕ್ಕೆ191 (ಕಾರ್ತಿಕ್ ಎಸ್‌.ಯು 82, ಶರತ್ ಶ್ರೀನಿವಾಸ್ 51, ಅಧೋಕ್ಷ ಹೆಗಡೆ ಔಟಾಗದೇ 26, ಗಣೇಶ್ ಭೋಸ್ಲೆ 43ಕ್ಕೆ2, ಲಲಿತ್ ಯಾದವ್ 37ಕ್ಕ3). 

ಆರ್‌ಎಸ್‌ಐ ಮೈದಾನ: ಮೊದಲ ಇನಿಂಗ್ಸ್: ಗುಜರಾತ್: 102.5 ಓವರ್‌ಗಳಲ್ಲಿ 262 (ಅಭಿಷೇಕ್ ದೇಸಾಯಿ 38, ಆರ್ಯ ದೇಸಾಯಿ 51, ಮನನ್ ಹಿಂಗರಜಿಯಾ 90, ಊರ್ವಿಲ್ ಪಟೇಲ್ 26, ಇರ್ಫಾನ್ ಉಮೇರ್ 41ಕ್ಕೆ3, ಹಿಮಾಂಶು ಸಿಂಗ್ 72ಕ್ಕೆ2, ಅಥರ್ವ ಅಂಕೋಲೆಕರ್ 50ಕ್ಕೆ2) ಮುಂಬೈ: 75 ಓವರ್‌ಗಳಲ್ಲಿ 6ಕ್ಕೆ222 (ಅಖಿಲ್ ಹೆರ್ವಾಡಕರ್ 37, ಸುವೆದ್ ಪಾರ್ಕರ್ 26, ಸಿದ್ಧೇಶ್ ಲಾಡ್ 30, ಸೂರ್ಯಾಂಶ್ ಶೆಡ್ಗೆ 34, ಆಕಾಶ್ ಆನಂದ್ 31, ಹಿಮಾಂಶು ಸಿಂಗ್ ಔಟಾಗದೇ 26, ಸರಳ್ ಪ್ರಜಾಪತಿ 68ಕ್ಕೆ2, ವಿಶಾಲ್ ಜೈಸ್ವಾಲ್ 57ಕ್ಕೆ3)

ಆಲೂರು 2: ಮಹಾರಾಷ್ಟ್ರ: 136 ಮತ್ತು 43 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 127 (ಯಶ್ ಕ್ಷೀರಸಾಗರ 65, ದಿಗ್ವಿಜಯ ಪಾಟೀಲ ಔಟಾಗದೇ 41) ಗೋವಾ 90.3 ಓವರ್‌ಗಳಲ್ಲಿ 333 (ಅಭಿನವ್ ತೆಜರಾಣಾ 77, ದರ್ಶನ್ ಮಿಶಾಲ್ 61, ಮೋಹಿತ್ ರೇಡಕರ್ 58, ಅರ್ಜುನ್ ತೆಂಡೂಲ್ಕರ್ ಔಟಾಗದೆ 36, ನಿಕಿತ್ ಧುಮಾಲ್ 43ಕ್ಕೆ4, ನದೀಂ ಶೇಖ್ 96ಕ್ಕೆ2, ಅಕ್ಷಯ ವೈಕರ್ 95ಕ್ಕೆ2, ಶಮ್ಸುಝಾನಾ ಖಾಜಿ 71ಕ್ಕೆ2)  

ಅಲೂರು 3: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌: 98.5 ಓವರ್‌ಗಳಲ್ಲಿ 315(ಲೋಚನ್ ಗೌಡ 59, ಪಿ. ಧ್ರುವ 25, ಕಾರ್ತಿಕ್ ಕೃಷ್ಣಾ 72, ಮಾಧವ್ ಪಿ ಬಜಾಜ್ 63, ಮುಕ್ತಾರ್ ಹುಸೇನ್ 64ಕ್ಕೆ4, ರಿಯಾನ್ ಪರಾಗ್ 106ಕ್ಕೆ4) ಅಸ್ಸಾಂ: 140 (ದೆನಿಶ್ ದಾಸ್ 28, ಆಕಾಶ್ ಸೇನ್‌ಗುಪ್ತಾ 42, ರಿಯಾನ್ ಪರಾಗ್ 39, ವೆಂಕಟೇಶ್ ಎಂ 28ಕ್ಕೆ5, ಅಭಿಷೇಕ್ ಅಹ್ಲಾವತ್ 65ಕ್ಕೆ4) ಎರಡನೇ ಇನಿಂಗ್ಸ್: 33.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 54 (ಅಭಿಷೇಕ್ ಠಾಕೂರಿ 28). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.