ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ | ಮೊಹಸಿನ್‌ ಮೋಡಿ: ಕೋಲ್ಟ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 23:37 IST
Last Updated 12 ಸೆಪ್ಟೆಂಬರ್ 2025, 23:37 IST
<div class="paragraphs"><p>ಮೊಹಸಿನ್‌ ಖಾನ್ ಬೌಲಿಂಗ್ ವೈಖರಿ</p><p></p></div>

ಮೊಹಸಿನ್‌ ಖಾನ್ ಬೌಲಿಂಗ್ ವೈಖರಿ

   

 ಚಿತ್ರ: ಅನೂಪ್ ರಾಘ.ಟಿ.

ADVERTISEMENT

ಮೈಸೂರು: ಮೊಹಸಿನ್ ಖಾನ್ (73ಕ್ಕೆ 6) ಅವರ ಸ್ಪಿನ್‌ ಮೋಡಿಯ ಬಲದಿಂದ ಕೆಎಸ್‌ಸಿಎ ಕೋಲ್ಟ್ಸ್‌ ತಂಡವು ಆಂಧ್ರ ಕ್ರಿಕೆಟ್‌ ಸಂಸ್ಥೆ ವಿರುದ್ಧ 141 ರನ್‌ಗಳ ಭರ್ಜರಿ ಜಯ ಸಾಧಿಸಿತು. 

ಇಲ್ಲಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ನಡೆದ ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದ ಕಡೆಯ ದಿನವಾದ ಶುಕ್ರವಾರ ಗೆಲುವಿಗೆ 417 ರನ್‌ ಬೆನ್ನತ್ತಿದ ಆಂಧ್ರ ತಂಡವು 9 ವಿಕೆಟ್‌ಗೆ 275 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಕೆಎಸ್‌ಎನ್‌ ರಾಜು ಗಾಯದಿಂದ ಕಣಕ್ಕಿಳಿಯಲಿಲ್ಲ. 

ಎಸ್‌ಜೆಸಿಇ ಮೈದಾನ: ಮೊದಲ ಇನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: 106.5 ಓವರ್‌ಗಳಲ್ಲಿ 450. ಆಂಧ್ರ ಕ್ರಿಕೆಟ್‌ ಸಂಸ್ಥೆ: 64.3 ಓವರ್‌ಗಳಲ್ಲಿ 223. ಎರಡನೇ ಇನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 189 ಡಿಕ್ಲೇರ್‌. ಆಂಧ್ರ ಕ್ರಿಕೆಟ್‌ ಸಂಸ್ಥೆ: 73.4 ಓವರ್‌ಗಳಲ್ಲಿ 9 ವಿಕೆಟ್‌ಗೆ 275 (ಕೆ. ಮಹೀಪ್‌ ಕುಮಾರ್ 93, ಗಿರಿನಾಥ್‌ ರೆಡ್ಡಿ 43. ಮೊಹಸಿನ್ ಖಾನ್‌ 73ಕ್ಕೆ 6). ಫಲಿತಾಂಶ: ಕೆಎಸ್‌ಸಿಎ ಕೋಲ್ಟ್ಸ್‌ ತಂಡಕ್ಕೆ 141 ರನ್‌ ಜಯ

ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ, ಮೈಸೂರು: ಮೊದಲ ಇನಿಂಗ್ಸ್‌: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 158.2 ಓವರ್‌ಗಳಲ್ಲಿ 8 ವಿಕೆಟ್‌ಗೆ 515 ಡಿಕ್ಲೇರ್. ಬರೋಡ ಕ್ರಿಕೆಟ್‌ ಸಂಸ್ಥೆ: 119.3 ಓವರ್‌ಗಳಲ್ಲಿ 440ಕ್ಕೆ ಆಲೌಟ್‌. ಎರಡನೇ ಇನ್ನಿಂಗ್ಸ್‌:  ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 16. ಫಲಿತಾಂಶ: ಡ್ರಾ 

ಬಿಜಿಎಸ್‌ ಕ್ರೀಡಾಂಗಣ: ವಿದರ್ಭ ಕ್ರಿಕೆಟ್‌ ಸಂಸ್ಥೆ: 383 ಮತ್ತು 18.5 ಓವರ್‌ಗಳಲ್ಲಿ 103. ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್‌: 75.3 ಓವರ್‌ಗಳಲ್ಲಿ 250 (ಅಧೋಕ್ಷ್ ಹೆಗ್ಡೆ 50; ಗಣೇಶ್ ಭೋಂಸ್ಲೆ 53ಕ್ಕೆ 4, ಲಲಿತ್‌ ಯಾದವ್‌ 46ಕ್ಕೆ 3). ಫಲಿತಾಂಶ: ಪಂದ್ಯ ಡ್ರಾ.

ಆಲೂರು 1 ಕ್ರೀಡಾಂಗಣ: ತ್ರಿಪುರ ಕ್ರಿಕೆಟ್‌ ಸಂಸ್ಥೆ: 113.5 ಓವರ್‌ಗಳಲ್ಲಿ 314. ಚಂಡೀಗಢ ರಾಜ್ಯ ಕ್ರಿಕೆಟ್‌ ಸಂಸ್ಥೆ: 106 ಓವರ್‌ಗಳಲ್ಲಿ 5 ವಿಕೆಟ್‌ಗೆ 337. ಫಲಿತಾಂಶ: ಪಂದ್ಯ ಡ್ರಾ.

ಆಲೂರು 2 ಕ್ರೀಡಾಂಗಣ: ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ: 136 ಮತ್ತು 125.6 ಓವರ್‌ಗಳಲ್ಲಿ 6 ವಿಕೆಟ್‌ಗೆ 388. ಗೋವಾ ಕ್ರಿಕೆಟ್‌ ಸಂಸ್ಥೆ: 90.3 ಓವರ್‌ಗಳಲ್ಲಿ 333. ಫಲಿತಾಂಶ: ಪಂದ್ಯ ಡ್ರಾ.

ಆರ್‌ಎಸ್‌ಐ ಕ್ರೀಡಾಂಗಣ: ಗುಜರಾತ್‌ ಕ್ರಿಕೆಟ್‌ ಸಂಸ್ಥೆ: 102.5 ಓವರ್‌ಗಳಲ್ಲಿ 262. ಮುಂಬೈ ಕ್ರಿಕೆಟ್‌ ಸಂಸ್ಥೆ: 75 ಓವರ್‌ಗಳಲ್ಲಿ 6 ವಿಕೆಟ್‌ಗೆ 222. ಫಲಿತಾಂಶ: ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.