ಕ್ರಿಕೆಟ್
(ಸಾಂಕೇತಿಕ ಚಿತ್ರ)
ಪುಲ್ವಾಮಾ, ಜಮ್ಮು–ಕಾಶ್ಮೀರ (ಪಿಟಿಐ): ದಕ್ಷಿಣ ಕಾಶ್ಮೀರದ ಪುಲ್ವಾಮಾ ಎಂದಾಕ್ಷಣ ಭಯೋತ್ಪಾದಕರ ದಾಳಿಯ ಹತ್ತಾರು ಪ್ರಕರಣಗಳು ನೆನಪಿಗೆ ಬರುತ್ತವೆ. ಆದರೆ ಸೋಮವಾರ ರಾತ್ರಿ ಇದೇ ಪುಲ್ವಾಮಾದಲ್ಲಿ ನೂರಾರು ಜನರು ಸೇರಿದ್ದರು. ಹೊನಲು ಬೆಳಕಿನ ಅಂಗಳದಲ್ಲಿ ಸಂಭ್ರಮಿಸಿದರು.
ಪುಲ್ವಾಮಾ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆರಂಭವಾದ ರಾಯಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯವು ಈ ಸಂಭ್ರಮಕ್ಕೆ ಕಾರಣವಾಯಿತು. ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿವೆ. ಮೊದಲ ಪಂದ್ಯದಲ್ಲಿ ರಾಯಲ್ ಗುಡ್‌ವಿಲ್ ಮತ್ತು ಸುಲ್ತಾನ್ ಸ್ಪ್ರಿಂಗ್ಸ್ ಬಾರಾಮುಲ್ಲಾ ತಂಡಗಳು ಮುಖಾಮುಖಿಯಾಗಿದ್ದವು.
‘ಹೊಸ ಇನಿಂಗ್ಸ್‌ನ ಆರಂಭ ಇದು’ ಎಂದು ಪುಲ್ವಾಮಾದ ಪಿಡಿಪಿ ಶಾಸಕ ವಹೀದ್ ಉರ್ ರೆಹಮಾನ್ ಬಣ್ಣಿಸಿದರು.
‘ಕ್ರೀಡೆಯು ಭರವಸೆ ಮತ್ತು ಅವಕಾಶವನ್ನು ಬೆಸೆಯುವ ಸೇತುವೆ. ಇದು ಕೇವಲ ಪಂದ್ಯವಲ್ಲ. ಹಲವು ಆಕಾಂಕ್ಷೆಗಳ ಹಬ್ಬವಾಗಿದೆ’ ಎಂದೂ ಅವರು ಹೇಳಿದರು.
‘ಸ್ಥಳೀಯ ಪ್ರತಿಭೆಗಳಿಗೆ ಕ್ರೀಡೆಯತ್ತ ಆಕರ್ಷಿಸುವುದು ನಮ್ಮ ಮುಖ್ಯ ಗುರಿ. ಯುವಜನತೆಗೆ ಒಂದು ಉತ್ತಮ ವೇದಿಕೆ ನೀಡುವುದು ಈ ಟೂರ್ನಿಯ ಉದ್ದೇಶ‘ ಎಂದು ಆಯೋಜಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.