ADVERTISEMENT

ಮಗನೊಂದಿಗೆ ಕಣಕ್ಕಿಳಿಯಲಿರುವ ಟೈಗರ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 16:37 IST
Last Updated 19 ನವೆಂಬರ್ 2020, 16:37 IST
ಟೈಗರ್ ವುಡ್ಸ್
ಟೈಗರ್ ವುಡ್ಸ್   

ನ್ಯೂಯಾರ್ಕ್ (ಎಪಿ): ಗಾಲ್ಫ್ ಕ್ರೀಡೆಯ ದಂತಕಥೆ ಟೈಗರ್ ವುಡ್ಸ್ ಅವರು ಪಿಎನ್‌ಸಿ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ 11 ವರ್ಷದ ಮಗ ಚಾರ್ಲಿಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ಅಪ್ಪ–ಮಗ ಚಾಲೆಂಜ್ ಅಂಗವಾಗಿ ಅವರು ಈ ಟೂರ್ನಿಯಲ್ಲಿ ತಮ್ಮ ಪುತ್ರನೊಂದಿಗೆ ಆಡುವರು.

’ಈ ಟೂರ್ನಿಯಲ್ಲಿ ಆಡಲು ನಾನೆಷ್ಟು ಉತ್ಸುಕನಾಗಿದ್ದೇನೆಂದು ಹೇಳಲು ಪದಗಳೇ ನಿಲುಕುತ್ತಿಲ್ಲ. ಚಾರ್ಲಿ ಜೊತೆ ಮೊದಲ ಅಧಿಕೃತ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದೇನೆ ‘ ಎಂದು ಟೈಗರ್ ಹೇಳಿದ್ದಾರೆ.

ADVERTISEMENT

’ಜೂನಿಯರ್ ಗಾಲ್ಫರ್ ಆಗಿ ಮಗ ಬೆಳೆಯುವುದನ್ನು ನೋಡುತ್ತಿದ್ದೇನೆ. ಅದೊಂದು ಅಮೋಘ ಅನುಭವ. ಚಾರ್ಲಿ ಜೊತೆಗೆ ಆಡುವುದು ಒಂದು ಅಮೋಘ ಅನುಭವವಾಗಲಿದೆ‘ ಎಂದಿದ್ದಾರೆ.

ಡಿಸೆಂಬರ್ 19–20ರಂದು ಫ್ಲಾರಿಡಾದ ಒರ್ಲಾಂಡೊದ ರಿಟ್ಜ್‌ ಕಾರ್ಲಟನ್ ಗಾಲ್ಪ್‌ ಕ್ಲಬ್‌ನಲ್ಲಿ ಪಿಎನ್‌ಸಿ ಚಾಂಪಿಯನ್‌ಷಿಪ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.