ADVERTISEMENT

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ಕೆಎಸ್‌ಸಿಎ ಕೋಲ್ಟ್ಸ್‌ಗೆ ಹೀನಾಯ ಸೋಲು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 23:10 IST
Last Updated 6 ಸೆಪ್ಟೆಂಬರ್ 2025, 23:10 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಮೈಸೂರು: ಕೆಎಸ್‌ಸಿಎ ಕೋಲ್ಟ್ಸ್‌ ತಂಡವು ಶನಿವಾರ ಇಲ್ಲಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ನಡೆದ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಎದುರು 10 ವಿಕೆಟ್ ಅಂತರದಿಂದ ಹೀನಾಯ ಸೋಲು ಅನುಭವಿಸಿತು.

ADVERTISEMENT

ಪಂದ್ಯದ ಮೂರನೇ ದಿನದಂದು ಕೋಲ್ಟ್ಸ್‌ ತನ್ನ ಎರಡನೇ ಇನಿಂಗ್ಸ್‌ನಲ್ಲಿ 203 ರನ್‌ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಅನೀಶ್ವರ್‌ ಗೌತಮ್‌ (56) ಏಕಾಂಗಿ ಹೋರಾಟ ನಡೆಸಿದರು. ಎನ್. ಸಮರ್ಥ್‌ (31) ಸಾಥ್‌ ನೀಡಿದರು. ವೇಗಿ ದಿವೇಶ್ ಶರ್ಮ ಈ ಇಬ್ಬರನ್ನೂ ಬೌಲ್ಡ್‌ ಮಾಡುವ ಮೂಲಕ ಕೋಲ್ಟ್ಸ್‌ ಇನಿಂಗ್ಸ್‌ಗೆ ಮಂಗಳ ಹಾಡಿದರು. ಹಿಮಾಚಲ ಪ್ರದೇಶ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ವಿಪಿನ್‌ ಶರ್ಮ 55ಕ್ಕೆ 5 ವಿಕೆಟ್ ಉರುಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ 163 ರನ್‌ ಮುನ್ನಡೆ ಗಳಿಸಿದ್ದ ಹಿಮಾಚಲ ಪ್ರದೇಶ ಎರಡನೇ ಇನಿಂಗ್ಸ್‌ನಲ್ಲಿ ಇನ್ನುಳಿದ 41 ರನ್‌ಗಳ ಗುರಿಯನ್ನು ವಿಕೆಟ್ ನಷ್ಟವಿಲ್ಲದೇ ಮುಟ್ಟಿತು. ಈ ಗೆಲುವಿನೊಂದಿಗೆ 7 ಅಂಕ ಸಂಪಾದಿಸಿತು.

ಸಂಕ್ಷಿಪ್ತ ಸ್ಕೋರ್‌: ಎಸ್‌ಜೆಸಿಇ ಕ್ರೀಡಾಂಗಣ: ಮೊದಲ ಇನ್ನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: 41 ಓವರ್‌ಗಳಲ್ಲಿ 140. ಹಿಮಾಚಲ ಪ್ರದೇಶ: 91.1 ಓವರ್‌ಗಳಲ್ಲಿ 303. ಎರಡನೇ ಇನಿಂಗ್ಸ್‌: ಕೆಎಸ್‌ಸಿಎ ಕೋಲ್ಟ್ಸ್‌: 46.1 ಓವರ್‌ಗಳಲ್ಲಿ 203 (ಅನೀಶ್ವರ್ ಗೌತಮ್ 56, ಎನ್. ಸಮರ್ಥ್‌ 31. ವಿಪಿನ್‌ ಶರ್ಮ 55ಕ್ಕೆ 5, ದಿವೇಶ್‌ ಶರ್ಮ 58ಕ್ಕೆ 3). ಹಿಮಾಚಲ ಪ್ರದೇಶ: 6.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ( ರವಿ ಠಾಕೂರ್ ಔಟಾಗದೇ 23, ಅಂಕುಶ್ ಬೈನ್ಸ್‌ ಔಟಾಗದೇ 17).

ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಆಂಧ್ರ ಕ್ರಿಕೆಟ್‌ ಸಂಸ್ಥೆ: 83.5 ಓವರ್‌ಗಳಲ್ಲಿ 257. ಬರೋಡ ಕ್ರಿಕೆಟ್ ಸಂಸ್ಥೆ: 152.5 ಓವರ್‌ಗಳಲ್ಲಿ 9 ವಿಕೆಟ್‌ಗೆ 424 ( ಸುಕೃತ್‌ ಪಾಂಡೆ ಔಟಾಗದೇ 156, ಪಿ. ಮಹೇಶ್‌ 48. ಕೆಎಸ್‌ಎನ್‌ ರಾಜು 75ಕ್ಕೆ 4)

ಎರಡನೇ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 13 ಓವರ್‌ಗಳಲ್ಲಿ 2 ವಿಕೆಟ್‌ಗೆ 20 ( ಸಿ.ಆರ್. ಜ್ಞಾನೇಶ್ವರ್ ಔಟಾಗದೇ 14. ಪಿ. ಮಹೇಶ್ 0ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.