ADVERTISEMENT

ಲಂಬೂ ಬೌಲರ್‌ಗಳ ಖದರ್

ಗಿರೀಶದೊಡ್ಡಮನಿ
Published 23 ಫೆಬ್ರುವರಿ 2020, 19:45 IST
Last Updated 23 ಫೆಬ್ರುವರಿ 2020, 19:45 IST
ಕೈಲ್ ಜೆಮಿಸನ್
ಕೈಲ್ ಜೆಮಿಸನ್   
""

ವೆಲ್ಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಬಿಸಿ ಮುಟ್ಟಿಸಿದ ನ್ಯೂಜಿಲೆಂಡ್‌ ಬೌಲರ್ ಕೈಲ್ ಜೆಮಿಸನ್ ಅವರ ಎತ್ತರವೇ ಈಗ ಹೆಚ್ಚು ಸುದ್ದಿಯಾಗುತ್ತಿದೆ. 6.8 ಎತ್ತರದ ಜೆಮಿಸನ್ ತಮ್ಮ ಪದಾರ್ಪಣೆ ಟೆಸ್ಟ್‌ನಲ್ಲಿ ನಾಲ್ಕು ವಿಕೆಟ್ ಗಳಿಸಿ ಮಿಂಚಿದ್ದಾರೆ. ಭಾರತದ ಎದುರಿನ ಏಕದಿನ ಸರಣಿಯಲ್ಲಿಯೂ ಪದಾರ್ಪಣೆ ಮಾಡಿದ್ದ 25 ವರ್ಷದ ಕೈಲ್ ಅಬ್ಬರಿಸಿದ್ದರು. ದೊಡ್ಡ ಸಾಧನೆ ಮಾಡಿರುವ ಎತ್ತರದ ವೇಗಿಗಳ ಪಟ್ಟಿಯಲ್ಲಿ ಕೈಲ್ ತಮ್ಮನ್ನು ಗುರುತಿಸಿಕೊಳ್ಳುವರೇ? ಇಂತಹ ದೈಹಿಕ ರಚನೆ ಇರುವ ಬೌಲರ್‌ಗಳನ್ನು ಹೆಚ್ಚಾಗಿ ಕಾಡುವ ಗಾಯದ ಸಮಸ್ಯೆಯನ್ನು ಅವರು ನಿಭಾಯಿಸಬಲ್ಲರೇ? ಎಂಬ ಚರ್ಚೆಗೆ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಹತ್ತು ‘ಲಂಬೂ’ ಬೌಲರ್‌ಗಳ ಸಾಧನೆಯ ಇಣುಕುನೋಟ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.