ADVERTISEMENT

ಟಾಸ್‌ ವೇಳೆ ಎಡವಟ್ಟು: ಪಾಕ್ ನಾಯಕಿ ಹೇಳಿದ್ದೊಂದು, ರೆಫರಿ ಕೇಳಿಸಿಕೊಂಡಿದ್ದೊಂದು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2025, 10:55 IST
Last Updated 5 ಅಕ್ಟೋಬರ್ 2025, 10:55 IST
   

ಕೊಲಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯದ ಟಾಸ್‌ ವೇಳೆ ತಪ್ಪು ನಿರ್ಧಾರವೊಂದು ಜರುಗಿದೆ.

ಪಂದ್ಯದ ಟಾಸ್‌ ವೇಳೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ ಅವರು ನಾಣ್ಯವನ್ನು ಚಿಮ್ಮಿಸಿದಾಗ, ಪಾಕ್‌ ನಾಯಕಿ ಫಾತಿಮಾ ಸನಾ ಅವರು ‘ಟೇಲ್ಸ್‌’ ಎಂದು ಹೇಳಿದ್ದಾರೆ. ಆದರೆ, ಪಂದ್ಯದ ರೆಫರಿ ಶಾಂಡ್ರೆ ಫ್ರಿಟ್ಜ್ ಹಾಗೂ ವೀಕ್ಷಕ ವಿವರಣೆಗಾರ್ತಿ ಮೆಲ್ ಜೋನ್ಸ್ ಅವರು ‘ಹೆಡ್‌’ ಎಂದು ತಪ್ಪಾಗಿ ಕೇಳಿಸಿಕೊಂಡಿದ್ದಾರೆ. ನಾಣ್ಯವು ಹೆಡ್‌ ಬಿದ್ದಿದ್ದರಿಂದ, ರೆಫರಿ ಸೂಚನೆಯಂತೆ ಪಾಕ್‌ ನಾಯಕಿಯು ಬೌಲಿಂಗ್‌ ಆಯ್ದುಕೊಂಡಿದ್ದರು.

ಟಾಸ್‌ ವೇಳೆ ನಡೆದ ಈ ಗೊಂದಲಕ್ಕೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು ತಕ್ಷಣವೇ ಯಾವುದೇ ಪ್ರತಿರೋಧ ವ್ಯಕ್ತಪಡಿಸಲಿಲ್ಲ.

ADVERTISEMENT

ಟಾಸ್‌ ನಂತರ ಉಭಯ ತಂಡಗಳ ನಾಯಕಿಯರು ಹಸ್ತಲಾಘವ ಮಾಡಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.