ADVERTISEMENT

ದೆಹಲಿ ವಾಯುಮಾಲಿನ್ಯ; ಟಿ–20 ಪಂದ್ಯದ ವೇಳೆ ವಾಂತಿ ಮಾಡಿಕೊಂಡ ಬಾಂಗ್ಲಾ ಆಟಗಾರರು

ಏಜೆನ್ಸೀಸ್
Published 6 ನವೆಂಬರ್ 2019, 10:01 IST
Last Updated 6 ನವೆಂಬರ್ 2019, 10:01 IST
   

ನವದೆಹಲಿ:ಭಾನುವಾರ ನಡೆದ ಟಿ 20 ಪಂದ್ಯದ ವೇಳೆವಿಪರೀತ ವಾಯುಮಾಲಿನ್ಯದಿಂದಾಗಿಬಾಂಗ್ಲಾ ಕ್ರಿಕೆಟ್‌ ತಂಡದಸೌಮ್ಯ ಸರ್ಕಾರ್ ಮತ್ತು ಇನ್ನೊಬ್ಬ ಆಟಗಾರ ಮೈದಾನದಲ್ಲೇವಾಂತಿ ಮಾಡಿಕೊಂಡಿದ್ದಾರೆಎಂದು espncricinfo.comವರದಿ ಮಾಡಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶದನಡುವೆ ಮೊದಲ ಟಿ20 ಪಂದ್ಯ ನಡೆದಿದ್ದು,ಬಾಂಗ್ಲಾ ತಂಡಫೀಲ್ಡಿಂಡ್‌ಮಾಡುತ್ತಿದ್ದಾಗ ಆಟಗಾರ ಇಂಥ ಅವಸ್ಥೆ ಪಟ್ಟಿದ್ದಾರೆ.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 148 ರನ್‌ಗಳಿಸಿತು, ಬಾಂಗ್ಲಾ ತಂಡವು 19.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಯಶಸ್ವಿಯಾಗಿ ಬೆನ್ನಟ್ಟಿತು.

ನಾವು ಭಾರತ ಬೌಲರ್‌ಗಳನ್ನು ಎದುರಿಸುವ ಬಗ್ಗೆ ಚಿಂತಿತರಾಗಿದ್ದೆವು. ವಾಯು ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲಎಂದು ಮುಷ್ಫಿಕುರ್ ರಹೀಮ್ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

ಕಠಿಣ ಪರಿಸ್ಥಿತಿಯಲ್ಲಿಪಂದ್ಯ ಆಡಲು ಒಪ್ಪಿಕೊಂಡ ಭಾರತ ಮತ್ತು ಬಾಂಗ್ಲಾ ತಂಡದ ಆಟಗಾರರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾದೇಶವು1–0 ಅಂತರದಲ್ಲಿ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.