
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಮೆಲ್ಬರ್ನ್: ಭಾರತ ಮೂಲದ ಇಬ್ಬರು ಆಟಗಾರರು ಆಸ್ಟ್ರೇಲಿಯಾದ 19 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯು ಜನವರಿ 15 ರಿಂದ ಫೆಬ್ರುವರಿ 6ರವರೆಗೆ ನಮಿಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸುವ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿರುವ ಆರ್ಯನ್ ಶರ್ಮಾ ಮತ್ತು ಜಾನ್ ಜೇಮ್ಸ್ ಅವರು ಭಾರತದ ಮೂಲದವರಾಗಿದ್ದಾರೆ.
ಆರ್ಯನ್ ಬ್ಯಾಟರ್ ಆಗಿದ್ದು, ಎಡಗೈ ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಜೇಮ್ಸ್ ಅವರು ಬಲಗೈ ಮಧ್ಯಮವೇಗಿ–ಆಲ್‌ರೌಂಡರ್ ಆಗಿದ್ದಾರೆ. ಹೋದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಯೂತ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಇವರಿಬ್ಬರೂ ಭಾರತ ತಂಡದ ಎದುರು ಆಡಿದ್ದರು.
ಪ್ರಸ್ತುತ ತಂಡದಲ್ಲಿ ಶ್ರೀಲಂಕಾ ಮೂಲಕ ನಾದೆನ್ ಕೂರೇ ಮತ್ತು ನಿತೀಶ್ ಸ್ಯಾಮುಯೆಲ್ ಹಾಗೂ ಚೀನಾದ ಅಲೆಕ್ಸ್ ಲೀ ಯಂಗ್ ಕೂಡ ಇದ್ದಾರೆ.
ಹೋದ ಸಲದ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಯುವ ತಂಡವು ಚಾಂಪಿಯನ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.