ADVERTISEMENT

ದಕ್ಷಿಣ ಆಫ್ರಿಕಾದ ಇಬ್ಬರು ಕ್ರಿಕೆಟಿಗರಿಗೆ ಕೋವಿಡ್

ಪಿಟಿಐ
Published 20 ಆಗಸ್ಟ್ 2020, 14:53 IST
Last Updated 20 ಆಗಸ್ಟ್ 2020, 14:53 IST
ಕೋವಿಡ್
ಕೋವಿಡ್   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಇಬ್ಬರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಗುರುವಾರ ತಿಳಿಸಿದೆ. ಆದರೆ ಸೋಂಕಿಗೆ ಒಳಗಾದವರ ಹೆಸರನ್ನು ಅದು ಬಹಿರಂಗಪಡಿಸಲಿಲ್ಲ. ಸೋಂಕು ಇರುವವರು ವಿಶೇಷವಾಗಿ ಆಯೋಜಿಸಲಾಗುವ ಸಾಂಸ್ಕೃತಿಕ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.

ತಂಡಕ್ಕೆ ಆಟಕ್ಕೆ ಹೊರತಾದ ವಿಶೇಷ ತರಬೇತಿ ನೀಡುವುದಕ್ಕಾಗಿಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಸಾಂಸ್ಕೃತಿಕ ಶಿಬಿರವನ್ನು ಆಯೋಜಿಸಿದ್ದು ಎರಡು ದಿನಗಳ ಹಿಂದೆ ಆರಂಭಗೊಂಡಿರುವ ಶಿಬಿರ ಶನಿವಾರ ಮುಕ್ತಾಯಗೊಳ್ಳಲಿದೆ. ಇದರಲ್ಲಿ 32 ಆಟಗಾರರು ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ಆಟಗಾರರು ಮತ್ತು ನೆರವು ಸಿಬ್ಬಂದಿಯ ಒಟ್ಟು 50 ಪರೀಕ್ಷೆಗಳನ್ನು ಮಾಡಿತ್ತು. ಸೋಂಕು ದೃಢಪಟ್ಟವವರನ್ನು ಪ್ರತ್ಯೇಕವಾಸಕ್ಕೆ ಕಳುಹಿಸಲಾಗಿದ್ದು ಆನ್‌ಲೈನ್‌ ಮೂಲಕ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಸಿಎಸ್‌ಎ ತಿಳಿಸಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿ ಧ್ರುವೀಕರಣಗೊಂಡಿದ್ದು ಇದರಿಂದಾಗಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಆಂದೋಲನ ಚುರುಕು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಶಿಬಿರ ಆಯೋಜಿಸಲಾಗಿದೆ. ವರ್ಣಭೇದ ನೀತಿಯ ವಿರುದ್ಧ ಮಾಜಿ ವೇಗದ ಬೌಲರ್ ಮಕಾಯ ಎಂಟಿನಿ ಅವರಂಥ ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.