ADVERTISEMENT

India Pakistan Tensions: ಪಿಎಸ್‌ಎಲ್‌ ಆತಿಥ್ಯಕ್ಕೆ ದುಬೈ ನಕಾರ ಸಾಧ್ಯತೆ

ಪಿಟಿಐ
Published 9 ಮೇ 2025, 14:21 IST
Last Updated 9 ಮೇ 2025, 14:21 IST
<div class="paragraphs"><p>ಪಿಎಸ್‌ಎಲ್‌</p></div>

ಪಿಎಸ್‌ಎಲ್‌

   

ಪಿಎಸ್‌ಎಲ್‌ ವೆಬ್‌ಸೈಟ್ ಚಿತ್ರ

ದುಬೈ: ಪಾಕಿಸ್ತಾನ ಸೂಪರ್‌ ಲೀಗ್‌ನ (ಪಿಎಸ್‌ಎಲ್‌) ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಯೋಜನೆ ‍ಫಲ ನೀಡುವ ಸಂಭವ ಕಡಿಮೆಯಾಗಿದೆ. ಭಾರತ– ಪಾಕಿಸ್ತಾನ ಗಡಿ ಸಂಘರ್ಷದ ಕಾರಣ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ‍ಪಾಕಿಸ್ತಾನದ ವಿನಂತಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ.

ADVERTISEMENT

ಗಡಿ ಉದ್ವಿಗ್ನತೆಯ ಕಾರಣ ಪಿಎಸ್‌ಎಲ್‌ನ ಉಳಿದ ಪಂದ್ಯಗಳನ್ನು ದುಬೈನಲ್ಲಿ ನಡೆಸುವುದಾಗಿ ಪಿಸಿಬಿ ತಿಳಿಸಿತ್ತು. ಆದರೆ ಇದನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿರಸ್ಕರಿಸುವುದು ಬಹುತೇಕ ಖಚಿತ ಎಂದು ಈ ಬೆಳವಣಿಗೆಯ ಅರಿವಿರುವ ಇಸಿಬಿಯ ಮೂಲವೊಂದು ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಗಡಿಯಲ್ಲಿ ಸಂಘರ್ಷ ಆರಂಭವಾಗಿದ್ದು, ಭದ್ರತೆಯ ಆತಂಕದ ಕಾರಣ ನೀಡಿ ಎಮಿರೇಟ್ಸ್ ಮಂಡಳಿ ಆತಿಥ್ಯದ ವಿನಂತಿ ನಿರಾಕರಿಸಲಿದೆ ಎನ್ನಲಾಗಿದೆ.‌

ಎಮಿರೇಟ್ಸ್ ಕ್ರಿಕೆಟ್‌ ಮಂಡಳಿ ಇತ್ತೀಚಿನ ವರ್ಷಗಳಲ್ಲಿ ಬಿಸಿಸಿಐ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. 2021ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಭಾರತದ ಉಸ್ತುವಾರಿಯಲ್ಲಿ ಇಲ್ಲಿಯೇ ನಡೆದಿದ್ದವು. ಇದರ ಜೊತೆಗೆ ಐಪಿಎಲ್‌ಗೂ ಒಮ್ಮೆ ಆತಿಥ್ಯ ನೀಡಿತ್ತು. ಚಾಂಪಿಯನ್ಸ್‌ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದಾಗ, ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು.

ಐಸಿಸಿಯ ಕೇಂದ್ರ ಕಚೇರಿ ದುಬೈನಲ್ಲಿದ್ದು, ಇದಕ್ಕೆ ಭಾರತದ ಜಯ್ ಶಾ ಅವರು ಮುಖ್ಯಸ್ಥರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.