ADVERTISEMENT

ಭಾರತ ತಂಡವನ್ನು ಅವರ ತವರಿನಲ್ಲಿ ಸೋಲಿಸಬೇಕು: ಲ್ಯಾಂಗರ್

ಪಿಟಿಐ
Published 1 ಮೇ 2020, 19:30 IST
Last Updated 1 ಮೇ 2020, 19:30 IST
ಜಸ್ಟಿನ್ ಲ್ಯಾಂಗರ್
ಜಸ್ಟಿನ್ ಲ್ಯಾಂಗರ್   

ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡವನ್ನು ಅದರ ತವರುನೆಲದಲ್ಲಿಯೇ ಸೋಲಿಸಬೇಕು. ಅವರು ಇಲ್ಲಿಗೆ ಬಂದಾಗಲೂ ಸೋಲಿಸಬೇಕೆಂಬುದೇ ನಮ್ಮ ಗುರಿ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡವು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಕುರಿತು ಪ್ರತಿಕ್ರಿಯಸಿದ ಅವರು, ‘ನಮ್ಮ ಆಟಗಾರರಲ್ಲಿ ಇದು ಹೊಸ ಹುಮ್ಮಸ್ಸು ಹುಟ್ಟುಹಾಕಿದೆ. ಶ್ರೇಷ್ಠ ತಂಡಗಳನ್ನು ಸೋಲಿಸುವುದರೊಂದಿಗೆ ಮತ್ತಷ್ಟು ಶ್ರೇಷ್ಠರಾಗಬೇಕು. ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದಾಗಲೇ ಉನ್ನತ ಸ್ಥಾನಕ್ಕೇರಲು ಸಾಧ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT